ಅಮಲು ಪದಾರ್ಥ ಸೇವಿಸಿ ಅನುಚಿತ ವರ್ತನೆ | ಇಬ್ಬರು ಪೊಲೀಸ್ ವಶಕ್ಕೆ

ಪುತ್ತೂರು: ನಗರದ ಕಿಲ್ಲೇ ಮೈದಾನದ ಬಳಿ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಬಪ್ಪಳಿಗೆ ನಿವಾಸಿ ಉಮ್ಮರ್ ಫಾರೂಕ್, ಉಳ್ಳಾಲ ಮುಕ್ಕಚೇರಿ ನಿವಾಸಿ ಮೊಹಿದ್ದಿನಿ ಪೊಲೀಸ್ ವಶವಾದವರು.

ಪುರಭವನದ ಬಳಿ ಇಬ್ಬರು ಯುವಕರು ಅನುಚಿತವಾಗಿ ವರ್ತಿಸಿರುವ ಕುರಿತು ಮಾಹಿತಿ ತಿಳಿಸಿದ ಪುತ್ತೂರು ನಗರ ಪೊಲೀಸರು ತೆರಳಿದಾಗ ಇಬ್ಬರು ಪರಾರಿಯಾಗಲು ಯತ್ನಿಸಿದ್ದರು. ತಕ್ಷಣ ಇಬ್ಬರನ್ನು ತಡೆದು ವಿಚಾರಿಸಿದಾಗ ಗಾಂಜಾ ನಶೆಯಲ್ಲಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅಮಲು ಪದಾರ್ಥ ಸೇವನೆ ಮಾಡಿರುವುದು ದೃಢಪಟ್ಟಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top