ಬೆಳ್ತಂಗಡಿ: ಪೋಲಂಡ್ ದೇಶದಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ.
ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ನಿವಾಸಿ ರೆಜಿ ಕೆ.ಎ ಅವರ ಪುತ್ರ ಆಲ್ವಿನ್ ಕೆ.ಆರ್. ಅವರಿಗೆ ಮನೋಜ್ ಎಂಬಾತ ವೀಸಾ ಕೊಡುವುದಾಗಿ ವಂಚಿಸಿರುವುದಾಗಿ ತಿಳಿದು ಬಂದಿದೆ.
ಆರೋಪಿ ವೀಸಾ ಕೊಡಿಸುವುದಾಗಿ 2023 ಮೇ ತಿಂಗಳಿನಿಂದ 2024 ಮಾ.19 ರ ತನಕ ವಿವಿಧ ಕಾರಣ ನೀಡಿ ಹಂತ ಹಂತವಾಗಿ 2.50 ಲಕ್ಷ ರೂ. ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವೀಸಾ ಕೊಡಿಸದೇ ವಮಚಿಸಿರುವುದಾಗಿ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.