ಪುತ್ತೂರು: ವಿಶ್ವವಿದ್ಯಾನಿಲಯ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ಪಡೆಯುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಎಸ್.ಡಿ.ಎಂ. ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ 2023-24 ನೇ ಸಾಲಿನ ಪುರುಷರ ವಿಭಾಗದ ಪ್ರೊ| ರಿಚರ್ಡ್ ರೆಬೆಲ್ಲೊ ರೋಲಿಂಗ್ ಟ್ರೋಫಿ ಹಾಗೂ ಮಹಿಳೆಯರ ವಿಭಾಗದ ಶಿರ್ವ ಬ್ಲಾಸಮ್ ಮ್ಯಾನ್ಷನ್ ಸೆಲೆಸ್ಟಿನ್ ಡಿಸೋಜಾ ಟ್ರೋಫಿಯಲ್ಲಿ ಸಂತ ಫಿಲೋಮಿನಾದ ಕ್ರೀಡಾಪಟುಗಳ ಸಾಧನೆ ಗಮನಾರ್ಹವಾಗಿದೆ.
ಪ್ರಥಮ ಬಿ ಎಸ್ ಸಿ ಯ ಸ್ಪಂದನಾ ಮಹಿಳೆಯರ 45 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುದರ ಮೂಲಕ ಚಿನ್ನದ ಪದಕ ಪಡೆದುಕೊಂಡು ಹೊಸ ಕೂಟ ದಾಖಲೆ ಮಾಡಿದ್ದಾರೆ. ಪ್ರಥಮ ಬಿ ಎಸ್ ಸಿ ಯ ಚೈತ್ರಿಕಾ ಕಂಚಿನ ಪದಕ, 64 ಕೆ.ಜಿ ವಿಭಾಗದಲ್ಲಿ ಪ್ರಥಮ ಎಂ.ಕಾಂ. ನ ಬ್ಯೂಲಾ ಪಿ.ಟಿ. ಚಿನ್ನದ ಪದಕ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಪುರುಷರ 67 ಕೆಜಿ ವಿಭಾಗದಲ್ಲಿ ತೃತೀಯ ಬಿಕಾಂನ ಮಹಮ್ಮದ್ ಮುನಾಫ್ ಬೆಳ್ಳಿ ಪದಕ, 55 ಕೆಜಿ ವಿಭಾಗದಲ್ಲಿ ದ್ವಿತೀಯ ಬಿಬಿಎ ಯ ಸುರಕ್ಷಿತ್ ಕಂಚಿನ ಪದಕ, ಪವರ್ ಲಿಫ್ಟಿಂಗ್ ನ 81 ಕೆಜಿ ವಿಭಾಗದಲ್ಲಿ ದ್ವಿತೀಯ ಬಿಕಾಂ ನ ಶಬರೀಶ್ ರೈ, 89 ಕಜಿ ವಿಭಾಗದಲ್ಲಿ ದ್ವಿತೀಯ ಬಿಕಾಂ ನ ಅಭಿರಾಮಚಂದ್ರ ಚಿನ್ನದ ಪದಕ ಪಡೆದು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ದ್ವಿತೀಯ ಬಿಕಾಂ ನ ಯತೀಶ್ 109 ಕೆಜಿ ವಿಭಾಗದಲ್ಲಿ ಪ್ರಥಮ, ಬಿ.ಎ.ಯ ರಂಜಿತ್ ಬೆಳ್ಳಿ ಪದಕ, ಸ್ಪಂದನಾ ಮಹಿಳಾ ವಿಭಾಗದಲ್ಲಿ ಬೆಸ್ಟ್ ಲಿಫ್ಟರ್ ಎಂಬ ಬಿರುದು ಗಳಿಸಿದ್ದಾರೆ.
ಮಹಿಳೆಯರ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತಂಡವು 30 ಅಂಕಗಳನ್ನು ಗಳಿಸುವ ಮೂಲಕ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 3 ನೇ ಸ್ಥಾನ ಪಡೆದಿದೆ. ಪುರುಷರ ತಂಡವು ವೈಟ್ ಲಿಫ್ಟಿಂಗ್ ನಲ್ಲಿ 40 ಅಂಕಗಳನ್ನು ಪಡೆಯುವ ಮೂಲಕ 3 ನೇ ಸ್ಥಾನವನ್ನು ಪಡೆದಿದೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲಿಯಾಸ್ ಪಿಂಟೋ, ತರಬೇತುದಾರ ಪುಷ್ಪರಾಜ್ ತರಬೇತು ನೀಡಿದ್ದಾರೆ. ಪ್ರಶಸ್ತಿ ವಿಜೇತ ತಂಡವನ್ನು ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟೊನಿ ಪ್ರಕಾಶ್ ಮೊಂತೆರೋ, ಸಂಚಾಲಕ ಅತಿ ವಂ. ಲಾರೆನ್ಸ್ ಮಸ್ಕರೇನಸ್, ಕ್ಯಾಂಸ್ ನಿರ್ದೇಶಕ ವಂ. ಸ್ಟ್ಯಾನಿ ಪಿಂಟೋ ಹಾಗೂ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದೆ.