ಮಂಗಳೂರು : ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 19 ಮಂದಿ ರೌಡಿ ಶೀಟರ್ ಗಳಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ ಈ 19 ಮಂದಿ ರೌಡಿಶೀಟರ್‌ಗಳಿಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಮೂಡಬಿದಿರೆಯ ಅತ್ತೂರು ನಸೀಬ್, ಕಾಟಿಪಳ್ಳದ ಶ್ರೀನಿವಾಸ್ ಎಚ್, ಬಜ್ಪೆ ಶಾಂತಿಗುಡ್ಡದ ಸಫ್ವಾನ್, ಬೊಂದೇಲ್ ನ ಜಯೇಶ್ ಯಾನೆ ಸಾಚು, ನೀರು ಮಾರ್ಗದ ವರುಣ್ ಪೂಜಾರಿ, ಅಶೋಕ ನಗರದ ಅಝೀಝ್, ಕಾವೂರಿನ ಇಶಾಂ್, ಸುರತ್ಕಲ್ ನ ಕಾರ್ತಿಕ್ ಶೆಟ್ಟಿ, ಕೈಕಂಬದ ದೀಕ್ಷಿತ್ ಪೂಜಾರಿ, ಕೃಷ್ಣಾಪುರದ ಲಕ್ಷ್ಮೀಶ, ಬೊಂಡಂತಿಲದ ಕಿಶೋರ್ ಸನಿಲ್, ಉಳ್ಳಾಲದ ಹಸೈನಾರ್ ಆಲಿ, ಕುದ್ರೋಳಿಯ ಅಬ್ದುಲ್ ಜಲೀಲ್, ಬೋಳೂರಿನ ರೋಶನ್ ಕಿಣಿ, ಕಸಬಾ ಬೆಂಗರೆಯ ಅಹ್ಮದ್ ಸಿನಾನ್, ಜಪ್ಪಿನಮೊಗರಿನ ದಿತೇಶ್ ಕುಮಾರ್, ಬಜಾಲ್ ಗುರುಪ್ರಸಾದ್, ಭರತ್ ಪೂಜಾರಿ, ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ.
ರೌಡಿಶೀಟರ್‌ಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಈ ಕ್ರಮ ಜರಗಿಸಲಾಗಿದೆ. ಎಂದು ಕಮಿಷನರ್ ತಿಳಿಸಿದ್ದಾರೆ.