ಸರ್ವೆ ರಕ್ತೇಶ್ವರಿ ಹಿಂದೂ ಜಾಗರಣ ವೇದಿಕೆಯಿಂದ ಆಶ್ಲೇಷ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಸರ್ವೆ ರಕ್ತೇಶ್ವರಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಾ.30 ರಂದು ಸರ್ವೆ ರಕ್ತೇಶ್ವರಿ ಕಟ್ಟೆಯಲ್ಲಿ ನಡೆಯುವ 11ನೇ ವರ್ಷದ ಆಶ್ಲೇಷ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸರ್ವೆ ರಕ್ತೇಶ್ವರಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಜಯಂತ್ ಭಕ್ತಕೋಡಿ, ಕಾರ್ಯದರ್ಶಿ ಲಕ್ಷ್ಮೀಶ್  ರೈ, ಬೆಳಿಯಪ್ಪ ಗೌಡ ಸರ್ವೆ, ಪದ್ಮನಾಭ ಗೌಡ, ಪ್ರವೀಣ್ ನಾಯ್ಕ್ ನೇಕಿತಡ್ಕ, ನವೀನ್ ರೈ, ಯೋಗೀಶ್ ಟಿ., ಗೌತಮ್ ರೈ, ಭರತ್ ಸರ್ವೆ, ಜನಾರ್ಧನ ಸರ್ವೆ, ಜಿತೇಶ್ ಸರ್ವೆ, ಗಣೇಶ್ ಬಿ, ಧನಂಜಯ ಬಿ. ಉಪಸ್ಥಿತರಿದ್ದರು.

ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಮಂಜೇಶ್ವರ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಅಭಿನಯಿಸುವ, ತುಳುನಾಡ ರಂಗ ಬೊಳ್ಳಿ ರವಿ ರಾಮಕುಂಜ, ತುಳುನಾಡ ರಂಗಭೂಷಣ ಪುಷ್ಪರಾಜ್ ಬೊಳ್ವಾರ್, ಅನಿಲ್ ರಾಜ್ ಉಪ್ಪಳ, ಅಶೋಕ್ ಬೇಕೂರು ಅಭಿನಯದ ಕಲಿಗದ ಮಾಯಾರೆ ಪಂಜುರ್ಲಿ ತುಳು ಪೌರಾಣಿಕ, ಸಾಮಾಜಿಕ, ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top