ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರು-ಸದಸ್ಯರ ಅಧಿಕಾರ ಸ್ವೀಕಾರ

ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಯೊಳಗೆ ಇನ್ನು ಮುಂದೆ ಭ್ರಷ್ಟಾಚಾರ ಸಹಿತ ಮಧ್ಯವರ್ತಿಗಳಿಗೆ  ಬ್ರೋಕರ್‌ಗಳಿಗಅವಕಾಶವಿಲ್ಲ. ಬಡವರ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ ಮಾಡಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.

ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ, ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಶಾಸಕರು ಮಾತನಾಡಿದರು.

ನಾನು ಶಾಸಕನಾದ ಮೇಲೆ ಎಲ್ಲ ಕಚೇರಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಇದುವರೆಗೂ ಒಮ್ಮೆಯೂ ಪ್ರಾಧಿಕಾರದ ಕಚೇರಿಗೆ ಬಂದಿಲ್ಲ. ಇಲ್ಲಿನ ಕೆಲವೊಂದು ಕಾನೂನು, ನಿಯಮಾವಳಿಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿತ್ತು. ಇದಲ್ಲದೆ ಇಲ್ಲಿ ಅಧ್ಯಕ್ಷರಿರಲಿಲ್ಲ. ಈಗ ಅಧ್ಯಕ್ಷರು ಮತ್ತು ಸದಸ್ಯರ ನೇಮಕವಾಗಿದೆ. ಇನ್ನು  ಮುಂದೆ ತಿಂಗಳಿಗೊಮ್ಮೆ ಭೇಟಿ ನೀಡುವೆ ಎಂದವರು ಹೇಳಿದರು. ಕಟ್ ಕನ್ವರ್ಶನ್ ಸಮಸ್ಯೆಗೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಮೂಡುಬಿದರೆ ಪುರಸಭೆಯಲ್ಲಿ ಕೆಲವೊಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾನೂನು ಯಾವಾಗಲೂ ವ್ಯಾಖ್ಯಾನಕ್ಕೆ ಒಳಪಟ್ಟಿರುತ್ತದೆ. ಬಡವರ ಅನುಕೂಲಕ್ಕಾಗಿ ಕೆಲವೊಂದು ವ್ಯಾಖ್ಯಾನಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದವರು ಹೇಳಿದರು.































 
 

ನೂತನ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಮಾತನಾಡಿ, ಸಿಂಗಲ್ ಲೇಔಟ್ ಮತ್ತು ಕಟ್ ಕನ್ವರ್ಶನ್‌ಗೆ ಸಂಬಂಧಿಸಿ ಕಾನೂನು ತೊಡಕುಗಳಿವೆ. ಇದನ್ನು ನಿವಾರಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಪ್ರಾಧಿಕಾರದ ನೂತನ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಕಾಸಿಂ ಮತ್ತು ನಿಹಾಲ್ ಶೆಟ್ಟಿ  ಕೂಡ ಅಧ್ಯಕ್ಷರ ಜತೆ ಅಧಿಕಾರ ಸ್ವೀಕರಿಸಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್, ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಶಾರದಾ ಅರಸ್, ವಿಶಾಲಾಕ್ಷಿ ಬನ್ನೂರು, ಎಂ.ಎಸ್. ಮಹಮ್ಮದ್, ಮಹಮ್ಮದ್ ಬಡಗನ್ನೂರು, ಅಮಳ ರಾಮಚಂದ್ರ, ಕೃಷ್ಣ ಪ್ರಸಾದ್ ಆಳ್ವಾ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಪಿ.ಪಿ. ವರ್ಗೀಸ್, ಫಝಲ್ ಕೋಡಿಂಬಾಳ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top