ಲೋಕಸಭೆ ಚುನಾವಣೆ | ಪುತ್ತೂರಿನಲ್ಲಿ 9 ಮಾದರಿ ಮತಗಟ್ಟೆಗಳನ್ನು ಗುರುತಿಸಲಾಗಿದೆ | ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ

ಪುತ್ತೂರು : ಏ.26 ಹಾಗೂ ಮೇ7 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಂತಿಯುತ ಮತದಾನ ನಡೆಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.

ಭಾನುವಾರ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಚುನಾವಣೆ ಕುರಿತು ಮಾಹಿತಿ ನೀಡಿದರು.

ಮಾ.28 ರಿಂದ ಏ.4 ರ ತನಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಏ.5 ರಿಂದ ನಾಮಪತ್ರ ಪರಿಶೀಲನೆ ಹಾಗೂ ಏ.8 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಜೂ.6 ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.



































 
 

ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಾಣಾಜೆ, ಈಶ್ವರಮಂಗಲ ಹಾಗೂ ಸಾರಡ್ಕ ಈ ಮೂರು ಚೆಕ್‍ಪೋಸ್ಟ್ ಗಳನ್ನು ಗುರುತಿಸಲಾಗಿದ್ದು, ಈ ಚೆಕ್‍ ಪೋಸ್ಟ್  ಗಳಲ್ಲಿ ವೀಡಿಯೋ ಚಿತ್ರೀಕರಣ, ವೀಡಿಯೋ ಅನಾಲಿಸಿಸ್ ಸೇರಿದಂತೆ ಮೂರು ವಿಭಾಗಗಳಿಗೆ ತಂಡಗಳನ್ನು ರಚನೆ ಮಾಡಲಾಗಿದ್ದು, ಒಂದೊಂದು ತಂಡದಲ್ಲಿ ತಲಾ ಮೂರು ಜನರಂತೆ ಆರು ಮಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,13,481 ಮತರಾರರಿದ್ದು, 1,4,965 ಪುರುಷ ಹಾಗೂ 1,8,560 ಮಹಿಳಾ ಮತದಾರರಿದ್ದಾರೆ. 4581 ಯುವ ಮತದಾರರಿದ್ದು, 85 ವರ್ಷ ಮೇಲ್ಪಟ್ಟ 4186 ಮತದಾರರಿದ್ದಾರೆ. 85 ಮೇಲ್ಪಟ್ಟ  ಮತದಾರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 221 ಮತಗಟ್ಟೆಗಳಿದ್ದು, ಎರಡು 127 ಹಾಗೂ 128 ಮತಗಟ್ಟೆಗಳನ್ನು ಬದಲಾಯಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಮತದಾರರನ್ನು ಸೇರ್ಪಡೆಗೆ ಮಾ.23 ರಂದು ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದರು.

ಮತದಾನ ಪ್ರಕ್ರಿಯೆ ಒಂದು ಹಬ್ಬದಂತೆ. ಈ ನಿಟ್ಟಿನಲ್ಲಿ ಈಗಾಗಲೇ ಪುತ್ತೂರಿನಲ್ಲಿ 9 ಮಾದರಿ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ನಿಟ್ಟಿನಲ್ಲಿ ಕಂಟ್ರೋಲ್ ರೂಂನ್ನು ಪುತ್ತೂರಿನಲ್ಲಿ ತೆರೆಯಲಾಗಿದ್ದು, 08251-230357 ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಯಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ಕಾನೂನು ಉಲ್ಲಂಘನೆಯಾಗಿದ್ದರೆ ಈ ನಂಬರ್‍ ಗೆ ಕರೆಮಾಡಿ ತಿಳಿಸಬಹುದು ಎಂದು ಅವರು ವಿನಂತಿಸಿದರು.

ನೀತಿ ಸಂಹಿತೆ ಜಾರಿಯ ಹಿನ್ನಲೆಯಲ್ಲಿ ರಾಜಕೀಯವಾಗಿ ಅಳವಡಿಸುವ ಬ್ಯಾನರ್, ಬಂಟಿಂಗ್ಸ್‍ ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಖಾಸಗಿ ನಡೆಯುವ ಕಾರ್ಯಕ್ರಮಗಳನ್ನು ನಡೆಸುವುದಾದರೆ ಪರವಾನಿಗೆ ಪಡೆದುಕೊಂಡು ಕಾರ್ಯಕ್ರಮಗಳಿಗೆ ಅವಕಾಶವಿದೆ. ಈಗಾಗಲೇ ಸೇರ್ಪಡೆಗೊಂಡ ಮತದಾರರಿಗೆ ಮತಯಂತ್ರಗಳ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು. ಮತದಾನದ ಕಡ್ಡಾಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಚುನಾವಣೆ ನೋಡಲ್ ಅಧಿಕಾರಿಯಾಗಿ ಪುತ್ತೂರಿನಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಎಚ್.ಇಬ್ರಾಹಿಂಪುರ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಒಟ್ಟಾರೆಯಾಗಿ ಮತದಾನ ಒಂದು ಹಕ್ಕಾಗಿದ್ದು, ಶಾಂತಿಯುತವಾಗಿ, ಅಧಿಕ ಶೇಕಡಾವಾರು ಅಧಿಕ ಮತ ಚಲಾವಣೆ ಮಾಡುವಂತೆ ಸಾರ್ಜನಿಕರಲ್ಲಿ ವಿನಂತಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಪುರಂದರ, ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಎಚ್.ಇಬ್ರಾಹಿಂಪುರ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top