ಬೆಳ್ಳಾರೆ: ಸುಲಿದು ದಾಸ್ತಾನಿಟ್ಟಿದ್ದ ಐದು ಗೋಣಿ ಅಡಿಕೆ ಕಳವಾದ ಘಟನೆ ಸುಳ್ಯ ತಾಲೂಕಿನ ಕುಳ್ಳಂಪಾಡಿಯಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳವು ನಡೆದಿದ್ದು, ಕುಳ್ಳಂಪಾಡಿ ನಿವಾಸಿ ಹಿರಿಯಣ್ಣ ಗೌಡರು ಮೂರು ದಿನಗಳ ಹಿಂದೆ ಕುಟುಂಬ ಸಮೇತ ತನ್ನ ಅಕ್ಕನ ಮನೆಗೆ ಹೋದವರು ಮನೆಗೆ ಬಂದು ನೋಡಿದಾಗ ಸುಲಿದಿಟ್ಟಿದ್ದ ಅಡಿಕೆ ಐದು ಗೋಣಿ ಅಡಿಕೆ ಕಳವಾಗಿರುವುದು ಬೆಳಕಿ ಬಂದಿದೆ. ಕಳವಾದ ಅಡಿಕೆ ಮೌಲ್ಯ ಒಂದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಕುರಿತು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.