ಕಾಣಿಯೂರು: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಡಾ.ದೇವಿ ಪ್ರಸಾದ್ ಕಾನತ್ತೂರ್ ಅವರನ್ನು ಆಯ್ಕೆ ಮಾಡಲಾಗಿದೆ.
ದೇವಸ್ಥಾನದ ಆಡಳಿತ ಅಧಿಕಾರಿ, ಸುಳ್ಯ ತಹಶೀಲ್ದಾರ್ ಮಂಜುನಾಥ ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದೆ.
ಸಮಿತಿ ಸದಸ್ಯರಾಗಿ ಸತ್ಯನಾರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್ (ಅರ್ಚಕರು), ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ ಕಾಚಿಲ, ಮಹಿಲಪ್ಪ ಗೌಡ ಎಣ್ಮೂರು, ಪವಿತ್ರ ಮಲ್ಲೆಟ್ಟಿ, ಮಾಲತಿ ಕುದ್ವ ಆಯ್ಕೆಯಾಗಿದ್ದಾರೆ.