ಪುತ್ತೂರು: ಕಡಬ ತಾಲೂಕು ಆಲಂಕಾರು ಗ್ರಾಮದ ಶರವೂರು ಶ್ರೀ ದೇವಿಯ ವರ್ಷಾವಧಿ ಉತ್ಸವ ಮಾ.14 ರಿಂದ ಆರಂಭಗೊಂಡಿದ್ದು, ಮಾ. 23 ರ ವರೆಗೆ ನಡೆಯಲಿದೆ.
ಮಾ.14 ಬೆಳಗ್ಗೆ 8 ರಿಂದ ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ, ಗಣಹೋಮ ಕಲಶಾಭಿಶೇಕ, ಗೊನೆ ಮುಹೂರ್ತ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ 7 ಕ್ಕೆ ಧ್ವಜಾರೋಹಣ, ನಿತ್ಯಬಲಿ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.
ಮಾ.15 ಮಧ್ಯಾಹ್ನ 12 ರಿಂದ ಮಹಾಪೂಜೆ, ನಿತ್ಯಬಲಿ ನಡೆದು ಪ್ರಸಾದ ವಿತರಣೆ. ರಾತ್ರಿ 7 ರಿಂದ ಮಹಾಪೂಜೆ, ಭೂತಬಲಿ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಮಾ.16 ಮಧ್ಯಾಹ್ನ 12 ರಿಂದ ಮಹಾಪೂಜೆ, ನಿತ್ಯಬಲಿ ನಡೆದು ಪ್ರಸಾದ ವಿತರಣೆ. ಸಂಜೆ 5 ರಿಂದ ದೈವಗಳ ಭಂಡಾರ ತೆಗೆದು ರಾತ್ರಿ 7 ರಿಂದ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8:30 ರಿಂದ ಅರಸು ಉಳ್ಳಾಯ, ಮಹಿಷಂತಾಯ ಮತ್ತು ರಕ್ತೇಶ್ವರೀ ದೈವಗಳ ನರ್ತನೋತ್ಸವ ನಡೆಯಲಿದೆ.
ಮಾ.17 ಮಧ್ಯಾಹ್ನ 12 ರಿಂದ ಮಹಾಪೂಜೆ,ನಿತ್ಯಬಲಿ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ರಿಂದ ದೈವಗಳ ಭಂಡಾರ ತೆಗೆದು ಉಗ್ರಾಣ ಮುಹೂರ್ತ, ಬಲಿಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 9 ರಿಂದ ರುಥಿರಚಾಮುಂಡಿ, ಧೂಮಾವತಿ, ಬಂಟ ಮತ್ತು ಕೊಡಮಣಿತ್ತಾಯ ದೈವಗಳ ನರ್ತನೋತ್ಸವ ನಡೆಯಲಿದೆ.
ಮಾ.18 ಸೋಮವಾರ ಬೆಳಿಗ್ಗೆ 7 ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 6.30 ಕ್ಕೆ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ ನಡೆಯಲಿದೆ.
ಮಾ.19 ಮಂಗಳವಾರ ಬೆಳಿಗ್ಗೆ 7 ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ ಬಲಿ ಹೊರಟು ಉತ್ಸವ, ಮಾ.20 ಬುಧವಾರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ.
ಮಾ.21 ರಂದು ಬೆಳಿಗ್ಗೆ 8.30 ಕ್ಕೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12 ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ 6.30 ರಿಂದ ಸವಾರಿ ಮಂಟಪ ಕಟ್ಟೆ ಪೂಜೆಗಳು, ಕೆರೆಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಮಾ.22 ಶುಕ್ರವಾರ ಬೆಳಿಗ್ಗೆ ಬಲಿ ಹೊರಟು ಉತ್ಸವ, ಬಳಿಕ ಆಶ್ಲೇಷ ಬಲಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9 ರಿಂದ ಶ್ರೀ ಮಹಾರಥೋತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ನಡೆಯಲಿದೆ. ಮಾ.23 ಶನಿವಾರ ಬೆಳಿಗ್ಗೆ 8 ರಿಂದ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ, ಯಾತ್ರಾ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5 ರಿಂದ ಅವಬೃತ ಮೆರವಣಿಗೆ, ಕಟ್ಟೆಪೂಜೆಗಳು, ಸನತಮೊಗರು ಕುಮಾರಧಾರೆಯಲ್ಲಿ ಅವಭೃತ ಬಳಿಕ ಧ್ವಜಾವರೋಹಣ ನಡೆಯಲಿದೆ. ಮಧ್ಯಾಹ್ನ 3.30 ರಿಂದ ಕಡಬ ಸೌಪರ್ಣಿಕ ಮ್ಯೂಸಿಕ್ ನವರಿಂದ ಭಕ್ತಿ ರಸಮಂಜರಿ ನಡೆಯಲಿದೆ.
ಮಾ.24 ಭಾನುವಾರ ಬೆಳಿಗ್ಗೆ 9 ರಿಂದ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ, ಶಿರಾಡಿ ಮತ್ತು ಗುಳಿಗ ದೈವಗಳ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.