ಪುತ್ತೂರು: ಯುವತಿಯೋರ್ವಳನ್ನು ಇಬ್ಬರು ಯುವಕರು ಅತ್ಯಾಚಾರ ಮಾಡಿರುವ ಘಟನೆ ಕೆಮ್ಮಾಯಿಯ ಮನೆಯೊಂದರಲ್ಲಿ ನಡೆದಿದೆ.
ವಾಮಂಜೂರು ಮೂಲಕ ಯುವತಿ ಎಂದು ಹೇಳಲಾಗಿದ್ದು, ಕರ್ವೇಲು ಹಾಗೂ ಕಡೇಶ್ವಾಲ್ಯದ ಇಬ್ಬರು ಯುವಕರು ಕೆಲಸ ಕೊಡಿಸುವ ನೆಪದಲ್ಲಿ ಅತ್ಯಾಚಾರ ಮಾಡಿರುವುದಾಗಿ ತಿಳಿದು ಬಂದಿದೆ. ಯುವಕರಿಬ್ಬರು ಪರಾರಿಯಾಗಿದ್ದು, ತಕ್ಷಣ ಶೋಧ ನಡೆಸಿದ ಪೊಲೀಸರ ವಶಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.