ಹಾವೇರಿ ಕ್ಷೇತ್ರ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೆ.ಎಸ್‍.ಈಶ್ವರಪ್ಪ ಭಾರೀ ಆಕ್ರೋಶ | ಶಿವಮೊಗ್ಗದಿಂದ ಬಂಡಾಯ ಸಾಧ್ಯತೆ ?

ಶಿವಮೊಗ್ಗ: ಬಸವರಾಜ್ ಬೊಮ್ಮಾಯಿ ಅವರ ಹೆಸರು ಹಾವೇರಿ ಕ್ಷೇತ್ರಕ್ಕೆ ಘೋಷಣೆಯಾಗುತ್ತಿದ್ದಂತೆ ಮಾಜಿ ಸಿಎಂ ಕೆ.ಎಸ್‍.ಈಶ್ವರಪ್ಪ ಅವರು ಭಾರೀ ಆಕ್ರೋಶಿತರಾಗಿದ್ದಾರೆ. ಈ ಕುರಿತು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಅವರು ಮಾತನಾಡಿ ನಾನು 40 ವರ್ಷ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದು, ಅದನ್ನು ಗುರುತಿಸಿ ನನ್ನ ಮಗನಿಗೆ ಟಿಕೇಟ್ ನೀಡಬಹುದಿತ್ತು ಎಂದು ಹೇಳಿರುವ ಅವರು, ಶುಕ್ರವಾರ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

ನಾನು 40 ವರ್ಷ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಅದನ್ನು ಗುರುತಿಸಿ ನನ್ನ ಮಗನಿಗೆ ಟಿಕೆಟ್ ಕೊಡಬಹುದಿತ್ತು. ಸದಾನಂದ ಗೌಡ, ಸಿ.ಟಿ.ರವಿ, ಪ್ರತಾಪ್ ಸಿಂಹ ಅವರಿಗೆ ಅನ್ಯಾಯವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top