ಬೈಕ್ ಸವಾರನಿಗೆ ಎದುರಾದ ಕಾಡಾನೆ

ಬೆಳ್ತಂಗಡಿ: ಬೈಕ್ ಸವಾರರೊಬ್ಬರಿಗೆ ಕಾಡಾನೆ ಎದುರಾಗಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ.

ಮುಂಡಾಜೆ-ದಿಡುಪೆ ರಸ್ತೆಯ ಕಡಿರುದ್ಯಾವರ ಗ್ರಾಮದ ಜೋಡು ನೆರಳು ಬೊಳ್ಳೂರು ಬೈಲು ಎಂಬಲ್ಲಿ ಇಲ್ಲಿನ ಕೃಷಿಕ ಜಾರ್ಜ್ ಕೆ.ಜೆ. ಎಂಬವರು ತನ್ನ ಮಕ್ಕಳನ್ನು ರಾತ್ರಿ 8 ಗಂಟೆ ಸುಮಾರಿಗೆ ಬೆದ್ರಬೆಟ್ಟು ಕಡೆಯಿಂದ ಟ್ಯೂಷನ್ ಮುಗಿಸಿ ಬೈಕ್ ನಲ್ಲಿ ಕರೆದುಕೊಂಡು ಬರುವ ವೇಳೆ ರಸ್ತೆ ಮಧ್ಯದಲ್ಲಿ ಕಾಡಾನೆ ಎದುರಾಗಿದೆ.

ರಸ್ತೆಯ ತಿರುವಿನಲ್ಲಿ ಬೈಕ್ ಸವಾರನಿಗೆ ಸುಮಾರು 5 ಅಡಿ ಅಂತರದಲ್ಲಿ ಕಾಡಾನೆ ಕಂಡುಬಂದಿದ್ದು ಜತೆಯಲ್ಲಿ ಮಕ್ಕಳು ಇದ್ದ ಕಾರಣ ಸವಾರ ಸಂಪೂರ್ಣ ಕಂಗಲಾಗಿದ್ದಾರೆ. ರಸ್ತೆಯಲ್ಲಿ ತಿರುಗಾಡುತ್ತಿದ್ದ ಕಾಡಾನೆ ಕೊಂಚ ಸಮಯದ ಬಳಿಕ ಗುಡ್ಡದತ್ತ ತೆರಳಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top