ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರುತ್ತಿದ್ದು, ಈ ನಡುವೆ ಮೈಸೂರಿನಿಂದ ಹಾಲಿ ಸಂಸದ ಪ್ರತಾಪ್ ಸಿಂಹರಿಗೆ ಟಿಕೇಟ್ ಮಿಸ್ ಆಗಲಿದೆ ಎನ್ನಲಾಗಿದ್ದು, ಪ್ರಖ್ಯಾತ ಶಿಲ್ಪಿ, ಅಯೋಧ್ಯೆ ರಾಮಮಂದಿರದ ಶ್ರೀರಾಮ ಲಲ್ಲಾ ವಿಗ್ರಹ ನಿರ್ಮಿಸಿರುವ ಅರುಣ್ ಯೋಗಿರಾಜ್ಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ. ಈಗಾಗಲೇ ಯೋಗಿರಾಜ್ಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿ ಪಕ್ಷದ ಹಳಬರನ್ನು ಈ ಬಾರಿ ದೂರ ಇಟ್ಟಿದ್ದಾರೆ ಎನ್ನಲಾಗಿದ್ದು, ಮೈಸೂರಿನಿಂದ ಪ್ರತಾಪಸಿಂಹ ಬದಲು ಈ ಬಾರಿ ಯದುವೀರ್ ಗೆ ಟಿಕೇಟ್ ನೀಡಲಾಗುವುದು ಎಂದು ಸುದ್ದಿಯಾಗಿತ್ತು. ಇದೀಗ ಇಂದು ಸಂಜೆಯೊಳಗೆ ದೆಹಲಿಗೆ ಬರಲು ಅರುಣ್ ಯೋಗಿರಾಜ್ ಗೆ ಹೈಕಮಾಂಡ್ ಸೂಚನೆ ನೀಡಿದೆ. ಯದುವೀರ ಹಾಗೂ ಯೋಗಿರಾಜ್ ಅವರೊಂದಿಗೆ ನೇರವಾಗಿ ಚರ್ಚಿಸಿ ಟಿಕೆಟ್ ಫೈನಲ್ ಆಗಲಿದೆ ಎಂದು ತಿಳಿದು ಬಂದಿದೆ.
ಅಂತೂ ಶೀಘ್ರ ಬಿಜೆಪಿ ತನ್ನ 2ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಅನ್ನೋದು ಸದ್ಯದಲ್ಲೇ ತಿಳಿದು ಬರಲಿದೆ.