ಮಂಗಳೂರು: ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಮಂಗಳೂರಿನ ಕೊಡಿಯಾಲ್ ಬೈಲ್ ವಾತ್ಸಲ್ಯಧಾಮ ವೃದ್ಧಾಶ್ರಮಕ್ಕೆ ಭೇಟಿ ನೀಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ವೃದ್ಧಾಶ್ರಮದಲ್ಲಿರುವ ನಿರಾಶ್ರಿತರಿಗೆ ಅಗತ್ಯ ವಸ್ತುಗಳಾದ ಸೋಪು, ಹಣ್ಣು ಹಂಪಲು, ಬಾತ್ ಟವಲ್ ವಿತರಿಸಿ ಆ ದಿನದ ಭೋಜನ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಕೆಎಂ, ಕಾರ್ಯದರ್ಶಿ ಸಾರಿಕಾ ಸುರೇಶ್, ಉಪಾಧ್ಯಕ್ಷೆ ಸುನಂದ ಜಿ. ದಂಬೆಕೋಡಿ, ಕೋಶಾಧಿಕಾರಿ ಡಾ.ಅರುಣ ರಾಜೇಶ್, ಜೊತೆ ಕಾರ್ಯದರ್ಶಿ ತಾರಾ ಭಾಸ್ಕರ್, ಸಮಿತಿ ಸದಸ್ಯರುಗಳಾದ ಕೃಷ್ಣವೇಣಿ ಡಿ ಬಿ, ಗಾಯತ್ರಿ ವಿ ಗೌಡ, ಚಂದ್ರಕಲಾ ಪದ್ಮರಾಜ್, ಸತ್ಯ ಮಂಜುನಾಥ್, ಪೂಜಾ ಬಾಲಚಂದ್ರ, ಅಕ್ಷತಾ, ಸತ್ಯಲತಾ ಹಾಗೂ ವಾತ್ಸಲ್ಯ ಧಾಮ ವೃದ್ಧಾಶ್ರಮದ ಅಧ್ಯಕ್ಷ ಶ್ರೀನಾಥ್ ಹೆಗ್ಡೆ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.