ಪುತ್ತೂರು :ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು.

ಸುಮಾರು 90 ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ವಿಧಾನ ಸಭಾ ಅಧ್ಯಕ್ಷೆ ಝಹಿದ ಸಾಗರ್, ಉಪಾಧ್ಯಕ್ಷೆ ಝರೀನ, ಕಾರ್ಯದರ್ಶಿ ಸೌದ ಮಠ, ಜೊತೆಕಾರ್ಯದರ್ಶಿ ಫಾತಿಮ ನಿರ್ಮ, ಪುತ್ತೂರು ನಗರ ಸಭಾ ಸದಸ್ಯೆ ಫಾತಿಮತ್ ಝೊಹರಾ ಬನ್ನೂರು, ಉಪ್ಪಿನಂಗಡಿ ಪಂಚಾಯತ್ ಸದಸ್ಯೆ ನಫೀಸ ಮಠ ಹಾಗು ವಿಮ್ ಸದಸ್ಯರಾದ ನುಷರತ್, ಫೌಸಿಯ ಉಪಸ್ಥಿತರಿದ್ದರು.