ಬೆಂಗಳೂರು: ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಲೋಕಸಭೆ ಟಿಕೇಟ್ ಸಿಗುವುದಿಲ್ಲ. ಬದಲಾಗಿ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಟಿಕೇಟ್ ಫೈನಲ್ ಆಗಿದೆ. ಹೀಗೊಂದು ಸುದ್ದಿ ಕಳೆದ ಒಂದು ವಾರದಿಂದ ಹರಿದಾಡುತ್ತಿದೆ. ಇದು ಗಾಸಿಪ್ ಸುದ್ದಿ ಎಂದು ಬಿಜೆಪಿ ಹೈ ಕಮಾಂಡ್ ನ ಆಪ್ತ ಮೂಲವೊಂದು ಇದೀಗ ತಿಳಿಸಿದೆ.
ಈ ಪ್ರಕಾರ ಬಿ.ಎಸ್. ವೈ ಅವರು ಟಿಕೆಟ್ ಕೈ ತಪ್ಪುವವರ ಬೆಂಬಲಕ್ಕೆ ನಿಂತಿದ್ದಾರೆ. ಟಿಕೆಟ್ ಕೊಡಬಾರದೆಂದು ವಿರೋಧವಿರುವ ಬಿಜೆಪಿಯ 7 ಮಂದಿ ಹಾಲಿ ಸಂಸದರ ಪರ ನಿಂತು ಯಡಿಯೂರಪ್ಪ ಅವರು ಬ್ಯಾಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಉತ್ತರದಲ್ಲಿ ಡಿ. ವಿ. ಸದಾನಂದ ಗೌಡ, ಮಂಡ್ಯದಲ್ಲಿ ಜೆಡಿಎಸ್ ಪರ, ಮೈಸೂರಿನಲ್ಲಿ ಪ್ರತಾಪ್ ಸಿಂಹ, ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ, ಬೀದರನಲ್ಲಿ ಭಗವಂತ ಖೂಬ, ಉಡುಪಿಯಲ್ಲಿ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು ಮಾಡಿ ಬಿಜೆಪಿ ಹೈ ಕಮಾಂಡ್ ಗೆ ತಾನು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ.
ಈ ಕುರಿತು ನಾಳೆ (ಮಾ.10) ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮೋದಿ, ನಡ್ಡಾ, ಅಮಿತ್ ಶಾ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಬಿ ಎಸ್ ವೈ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಸಂಜೆಯೊಳಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ ಆಗಲಿದೆ. ಕರ್ನಾಟಕದಲ್ಲಿ ಬಿಎಸ್ ವೈ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೂರಕ್ಕೆ ನೂರರಷ್ಟು ಗ್ಯಾರಂಟಿಯಾಗಿದ್ದು, ಬಿ. ಎಲ್. ಸಂತೋಷ್ ಅವರ ಕೃಪಾಕಟಾಕ್ಷವೂ ಕಟೀಲ್ ಪರವಿರುವುದರಿಂದ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ 4 ನೇ ಬಾರಿಗೆ ಬಿಜೆಪಿಯಿಂದ ಎಂಪಿ ಟಿಕೆಟ್ ಪಡೆದು ಸ್ಪರ್ಧಿಸುವುದು ಸ್ಪಷ್ಟ ಹಾಗೂ ನೂರಕ್ಕೆ ನೂರರಷ್ಟು ಸತ್ಯವೆಂದು ವರದಿಯಾಗಿದೆ.
ವಿವಾದ ರಹಿತ, ನಿಷ್ಕಲ್ಮಶ ಮನಸ್ಸಿನ ನೇರ ನಡೆ ನುಡಿಯ ನಿಷ್ಕಳಂಕ ನಾಯಕರಾಗಿರುವ ಕಟೀಲ್ ಅವರು ಯಾವುದೇ ಹಗರಣವಿಲ್ಲದ, ಭ್ರಷ್ಟಾಚಾರವಿಲ್ಲದ ಜನಪರ, ಜನ ಮೆಚ್ಚಿದ ನಾಯಕರಾಗಿದ್ದಾರೆ. 2009 ರಿಂದ 2023 ರ ವರೆಗೆ ಸತತವಾಗಿ 3 ಅವಧಿಗಳಲ್ಲಿ ದಕ್ಷಿಣ ಕನ್ನಡದ ಎಂಪಿಯಾಗಿ ಒಂದು ಲಕ್ಷ ಕ್ಕೂ ಅಧಿಕ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದಿಂದ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಶಕ್ತಿ ಮೀರಿ ದುಡಿದ್ದಾರೆ. ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅತಿ ಹೆಚ್ಚು ಬಾರಿ ರಾಜ್ಯ ಪ್ರವಾಸ ಮಾಡಿ ರಾಜ್ಯದ ಮೂಲೆ ಮೂಲೆಗಳನ್ನು ಸುತ್ತಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಬೃಹತ್ ಶಕ್ತಿಶಾಲಿ ಹೆಮ್ಮರವಾಗಿಸಿದ್ದಾರೆ. ಈ ಸಲ ಅವರು ಸ್ಪರ್ಧಿಸಿದಲ್ಲಿ ಮೂರು ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಪ್ರಚಂಡ ಜಯಭೇರಿ ಬಾರಿಸುವುದು ಗ್ಯಾರಂಟಿ ಎಂಬ ಸಮೀಕ್ಷೆ ವ್ಯಕ್ತವಾಗಿದೆ.