ಪುತ್ತೂರು: ಕೇರಳ ರಾಜ್ಯದ ಕಾಂಞಗಾಡ್ ಚಿತ್ತಾರಿ ಕೊಟ್ಲಂಗಾಡ್ ಜಟ್ಟಿ ಮನೆತನದ ಶ್ರೀ ದುರ್ಗಾಮಲ್ಲಿಕಾರ್ಜುನ ತರವಾಡು ಮನೆಯ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರಥಮ ಹಂತದ ಕಾರ್ಯಕ್ರಮವಾಗಿ ನಾಗ ಪ್ರತಿಷ್ಠೆ ಪೂಜಾ ಕಾರ್ಯಕ್ರಮ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಮಂಗಳವಾರ ನಡೆಯಿತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಮಠದ ರಾಜಗುರು ಶ್ರೀ ಮರುಳಸಿದ್ಧ ಶಿವಾಚಾರ್ಯ ಮಹಾಸ್ವಾಮೀಜಿಗಳ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಪಿ.ಎಸ್.ಶಂಕರನಾರಾಯಣನ್ ನಂಬೂರಿ ಅವರ ನೇತೃತ್ವದಲ್ಲಿ ಬೆಳಗ್ಗೆ 12.30 ರ ಶುಭ ಮುಹೂರ್ತದಲ್ಲಿ ನಾಗ ಪ್ರತಿಷ್ಠೆ ನಡೆಯಿತು. ಬಳಿಕ ಮಹಾಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ 8 ಗಂಟೆಗೆ ಆಶ್ಲೇಷ ಬಲಿ ಪೂಜೆ ನಡೆದು ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕುಟುಂಬಸ್ಥರು , ಸ್ಥಳೀಯ ಭಕ್ತಾದಿಗಳು ಪಾಲ್ಗೊಂಡಿದ್ದರು.