ಪುತ್ತೂರು: ಶಿವಳ್ಳಿ ಕ್ರಿಕೆಟರ್ಸ್ ಸತತ 4ನೇ ವರ್ಷ ಅದ್ದೂರಿಯಾಗಿ ಆಯೋಜಿಸಿರುವ ಶಿವಳ್ಳಿ ಬ್ರಾಹ್ಮಣರ ಆಹ್ವಾನಿತ 13ತಂಡಗಳ ಅಂತರ್ ರಾಜ್ಯ ಮಟ್ಟದ ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್ 4 ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಕೂಟವು, ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಪಂದ್ಯಕೂಟವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿ, ಹಿಂದೂ ಸಮಾಜ ಒಗ್ಗಟ್ಟಾಗಿ ಮುಂದೆ ಸಾಗುವಲ್ಲಿ ವಿಪ್ರ ಸಮಾಜ ಮುಖ್ಯ ಪಾತ್ರವಹಿಸಲಿದೆ ಎಂದರು.
ಹೃದ್ರೋಗ ತಜ್ಞ ಡಾ. ಸುರೇಶ ಪುತ್ತೂರಾಯರು, ಬಿ.ಜೆ.ಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ ನಿವಾಸ್ ರಾವ್, ಅಂಬಿಕಾ ಸಮೂಹ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೋಡಂಕಿರಿ, ಸಂಪದ ಟ್ರೇಡರ್ಸ್ ಮಾಲಕ ರಾಜೇಶ್. ಎಸ್, ಕುಡುಪು ಪದ್ಮರಾಜ್ ತಂತ್ರಿ, ಸತೀಶ್ ಕೆದಿಲಾಯ, ನ್ಯಾಯವಾದಿ ಶ್ರೀಕೃಷ್ಣ ಕೇಕುಣ್ಣಾಯ, ಲಕ್ಷೀನಾರಾಯಣ ಕಡಂಬಳಿತ್ತಾಯ, ರತ್ನಾಕರ್ ರಾವ್ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಳ್ಳಿ ಸಂಪದದ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ ಜೆ. ಸಿ. ಅಡಿಗ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪಸಂಸ್ಕಾರ ಪ್ರಧಾನ ಪುರೋಹಿತ ಸರ್ವೇಶ್ವರ ಕೇಕುಣ್ಣಾಯ, ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಪುತ್ತೂರಾಯ, ಶಿವಳ್ಳಿ ಯುವ ಸಂಪದದ ಗೌರವಾಧ್ಯಕ್ಷ ಉದಯ್ ರಾವ್ ಪಜೀಮಣ್ಣು, ಮಾಜಿ ಅಧ್ಯಕ್ಷ ರಂಗನಾಥ ರಾವ್, ಪಾವಂಜೆ ಶಿವಳ್ಳಿ ಸಂಘದ ಅಧ್ಯಕ್ಷ ಸತೀಶ ಭಟ್ ಹಾಗೂ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ಉಡುಪಿ ಜಿಲ್ಲೆ, ಕೊಡಗು ಜಿಲ್ಲೆ, ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಜಿರೆ, ರಾಮಕುಂಜ, ಮಂಗಳೂರು, ಕಟೀಲ್ ಭಾಗಗಳಿಂದ ಸುಮಾರು 150ಕ್ಕೂ ಅಧಿಕ ಕ್ರೀಡಾಳುಗಳು 13 ತಂಡಗಳಾಗಿ ಪಾಲ್ಗೊಂಡರು. ಪಾವಂಜೆ ಶಿವಳ್ಳಿ ಫ್ರೆಂಡ್ಸ್ ತಂಡ ಪ್ರಥಮ, ಉಜಿರೆ ವಿಪ್ರಪ್ರಿಯರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಡಾ ಸುಜಯ್ ತಂತ್ರಿ ಸ್ವಾಗತಿಸಿದರು. ಹರಿಕೇಶವ್ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಗುರುರಂಜನ್ ಪುಣಿಂಚತ್ತಾಯ ವಂದಿಸಿದರು.