ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಪ್ರಗತಿಬಂಧು ಕೇಂದ್ರ ಒಕ್ಕೂಟ ಸಮಿತಿ ಸಭೆ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಶಕ್ಷರು ಮಹೇಶ್ ಕೆ ಸವಣೂರು ಸಭೆಯನ್ನು ಉಧ್ಘಾಟಿಸಿ ಮಾತನಾಡಿ, ಕಡಬ ತಾಲೂಕಿನ 63 ಒಕ್ಕೂಟದ ಅಧ್ಶಕ್ಷರುಗಳು ಸೇರಿ ಒಕ್ಕೂಟದ ಬಲವರ್ಧನೆಯನ್ನು ನಿಸ್ವಾರ್ಥತೆಯಿಂದ ಮಾಡುತ್ತಿರುವುದು ಅಭಿನಂದನಾರ್ಹ. ಅಧ್ಶಕ್ಷ ಒಬ್ಬ ನಾಯಕನಾಗಿ ತಮ್ಮ ವ್ಶಾಪ್ತಿಯ ಒಕ್ಕೂಟದ ಸದಸ್ಶರ ಕಷ್ಟಗಳಿಗೆ ಸ್ಪಂದಿಸಿ ಗ್ರಾಮಾಭಿವೃಧ್ಧಿ ಯೋಜನೆಯ ಸೌಲಭ್ಶಗಳ ಒದಗಿಸಿಕೊಟ್ಟಲ್ಲಿ ಒಕ್ಕೂಟವು ಸಮರ್ಥವಾಗಿ ನಡೆಯಲು ಸಾಧ್ಶವಾಗುತ್ತದೆ. ತಮ್ಮ ವ್ಶಾಪ್ತಿಯ ಒಕ್ಕೂಟದ ಅಸ್ತಿತ್ವ ಒಕ್ಕೂಟದ ಅಧ್ಶಕ್ಷನ ಕಾರ್ಯಕ್ಷಮತೆಯ ಮೇಲಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ. ಕಡಬ ತಾಲೂಕಿನ ಒಕ್ಕೂಟಗಳು ಜಿಲ್ಲೆಗೆ ಮಾದರಿಯಾಗಿ ಕರ್ತವ್ಶ ನಿರ್ವಹಿಸುತ್ತಿವೆ. ಒಕ್ಕೂಟದ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಒಕ್ಕೂಟದ ಅಧ್ಶಕ್ಷರುಗಳು ಇನ್ನಷ್ಟು ಶ್ರಮವಹಿಸಬೇಕು. ಯೋಜನೆಯ ಸೌಲಭ್ಶಗಳನ್ನು ಒಕ್ಕೂಟ ಮಟ್ಟದಲ್ಲಿ ಅತೀ ಹೆಚ್ಚು ತಲುಪಿಸಲು ಪ್ರಯತ್ನಿಸಿದಾಗ ಸದಸ್ಯರ ವಿಶ್ವಾಸವನ್ನು ಗಳಿಸಲು ಸಾಧ್ಶವಾಗುತ್ತದೆ ಎಂದರು.
ಕಡಬ ತಾಲೂಕು ಪ್ರಗತಿಬಂಧು ಕೇಂದ್ರ ಒಕ್ಕೂಟ ಸಮಿತಿ ಅಧ್ಶಕ್ಷ ಸಂತೋಷ್ ಕೇನ್ಯ ಅಧ್ಶಕ್ಷತೆ ವಹಿಸಿದ್ದರು
ವೇದಿಕೆಯಲ್ಲಿ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ನಿಕಟಪೂರ್ವ ಅಧ್ಶಕ್ಷ ಬಾಲಕೃಷ್ಣ ಗೌಡ ಹಾರ್ಪಲ, ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಕಡಬ ತಾಲೂಕಿನ ವಲಯ ಒಕ್ಕೂಟದ ಅಧ್ಶಕ್ಷರುಗಳಾದ ರಮೇಶ್ ರೈ ಆರ್ಪಾಜೆ. ಕುಶಾಲಪ್ಪ ಗೌಡˌ ರಾಮಚಂದ್ರ ಗೌಡ, ಉಮೇಶ್ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಸ್ವಾಗತಿಸಿ ಸಾಧನಾ ವರದಿ ಮಂಡಿಸಿದರು. ನೆಲ್ಶಾಡಿ ವಲಯ ಮೇಲ್ವೀಚಾರಕ ವಿಜೇಶ್ ಜೈನ್ ವಂದಿಸಿದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ 63 ಒಕ್ಕೂಟದ ಅಧ್ಶಕ್ಷರುಗಳು ಹಾಗೂ ಮೇಲ್ವೀಚಾರಕ ಶ್ರೇಣಿ ಸಿಬ್ಬಂದಿಗಳು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.