ಪುತ್ತೂರು ತಾಲೂಕು ತುಳುವೆರೆ ಮೇಳೊ-2024 ಉದ್ಘಾಟನೆ

ಪುತ್ತೂರು: ತುಳು ಭಾಷೆಯ ಉಳಿವಿಗಾಗಿ ಜಾಗೃತಿಯ ಕೆಲಸ ನಿರಂತರವಾಗಿ ನಡೆಯುತ್ತಿದೆ. ತುಳುಲಿಪಿಯ ಬಗ್ಗೆ ಯಾವುದೇ ಅನುಮಾನಗಳು ಬೇಡ. ವಿಧಾನ ಸೌಧದ ಒಳಗೂ ತುಳು ಭಾಷೆ ಕೇಳುತ್ತಿದ್ದು, ರಾಜ್ಯ ಎರಡನೇ ಭಾಷೆಯಾದ ಬಳಿಕ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಮಂಜಲ್ಪಡು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಪುತ್ತೂರು ತುಳುಕೂಟದಿಂದ ನಡೆದ ಪುತ್ತೂರು ತಾಲೂಕು ತುಳುವೆರೆ ಮೇಳೊ-2024 ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕಳಸೆಗೆ ಭತ್ತವನ್ನು ಹಾಕಿದ ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಮಾತನಾಡಿ, ತುಳು 8ನೇ ಪರಿಚ್ಛೇಧಕ್ಕೆ ಸೇರ್ಪಡೆಯಾಗಬೇಕೆಂಬ ನಿಟ್ಟಿನಲ್ಲಿ ಇಪ್ಪತ್ತೈದು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿದೆ. ಸದ್ಯ ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ ತುಳುವಿನ ಬಗ್ಗೆ ಉತ್ತಮ ಚರ್ಚೆ ನಡೆದಿದ್ದು, ಸಮಿತಿ ಮಾಡಿ ರಾಜ್ಯದ ಎರಡನೇ ಭಾಷೆ ಮಾಡುವ ಪ್ರಯತ್ನ ಮಾಡುವ ಬಗ್ಗೆ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು.































 
 

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಿಟಿ ಆಸ್ಪತ್ರೆಯ ವೈದ್ಯ ಡಾ. ಭಾಸ್ಕರ ಎಸ್., ನಗರ ಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ತುಳುವೆರೆ ಮೇಳೊ ಸಮಿತಿ ಗೌರವ ಉಪಾಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ, ಸಂಚಾಲಕ ವೆಂಕಟರಮಣ ಗೌಡ ಕಳುವಾಜೆ, ಉಪಾಧ್ಯಕ್ಷ ಹೀರಾ ಉದಯ್, ಜತೆ ಕಾರ್ಯದರ್ಶಿ ಪಿ. ಉಲ್ಲಾಸ್ ಪೈ ಉಪಸ್ಥಿತರಿದ್ದರು. 

ನಯನ ವಿ. ರೈ ಪ್ರಾರ್ಥಿಸಿದರು. ಪುತ್ತೂರು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ತುಳು ಭಾಷೆ ವಿಜಯಕುಮಾರ್ ಭಂಡಾರಿ ಹೆಬ್ಬಾರೆಬೈಲು, ತುಳು ನಾಟಕ ಯೂಸುಫ್ ಮಠ ಉಪ್ಪಿನಂಗಡಿ, ತುಳು ಯಕ್ಷಗಾನ ಕೊಳ್ತಿಗೆ ನಾರಾಯಣ ಗೌಡ, ನಾಟಿ ಔಷಧಿ ಯಮುನಾ ಪೂಜಾರಿ ನರಿಮೊಗರು, ತುಳು ಪಾಡ್ದನ/ಸಂಧಿ ಗುಬ್ಬಿ ಕೆಮ್ಮಾರ ಪೆರ್ಲಂಪಾಡಿ ಅವರಿಗೆ ಬಿರ್ದ್ ದ ತುಳುವೆರ್ ಪುತ್ತೂರು ತಾಲೂಕು ಪ್ರಶಸ್ತಿ 2024 ಪ್ರಧಾನ ಮಾಡಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top