ಮಂಗಳೂರು : ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ ಮೂಲದ ಯುವ ನಾಯಕ ಕಿರಣ್ ಬುಡ್ಲೆಗುತ್ತು ಅವರಿಗೆ ಲೋಕಸಭಾ ಟಿಕೇಟ್ ನೀಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.
ಡಿಕೆಶಿ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಕಿರಣ್ ಬುಡ್ಲೆಗುತ್ತು ವಿಗೆ ಹೈಕಮಾಂಡ್ ಕೃಪಾಕಟಾಕ್ಷ ತೋರಿದೆ ಎಂಬುದು ಬಹಿರಂಗವಾಗಿದೆ.
ಉಳಿದ ಆಕಾಂಕ್ಷಿಗಳಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ಈ ಮೂವರ ನಡುವೆ ಕಿರಣ್ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಿರಣ್ ಬುಡ್ಲೆಗುತ್ತು ಅವರು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿಯಲ್ಲಿದ್ದುಕೊಂಡು ಹಲವಾರು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಒಕ್ಕಲಿಗ ಸಮುದಾಯದ ಜತೆಗೆ ಜಿಲ್ಲೆಯ ಗಮನ ಸೆಳೆದಿದ್ದರು.
ಹಿಂದೂ ನಾಯಕರ ಬಂಡಾಯದಿಂದ ಕಾಂಗ್ರೆಸ್ ಗೆ ಲಾಭ ಆಗೋ ಲೆಕ್ಕಾಚಾರದಿಂದ ಯುವ ನಾಯಕನಿಗೆ ಮಣೆ ಹಾಕಿ ದ.ಕ. ದಲ್ಲಿ ಕಾಂಗ್ರೆಸ್ ಗೆಲುವಿಗೆ ಲೆಕ್ಕಾಚಾರ ಶುರುಮಾಡಿದ್ದಾರೆ ಎಂಬುದು ಲಭ್ಯವಾಗಿರುವ ಮಾಹಿತಿ.
ಇತ್ತೀಚೆಗೆ ಮಂಗಳೂರಿನಲ್ಲಿ ಅಭ್ಯರ್ಥಿಆಯ್ಕೆ ವಿಚಾರದಲ್ಲಿ ನಡೆದ ಸಭೆಯಲ್ಲೂ ಹೆಸರು ಪರಿಗಣನೆಯಲ್ಲಿದ್ದು ವೀಕ್ಷಕರಾಗಿ ಬಂದಿದ್ದ ಸಚಿವ ಮಧು ಬಂಗಾರಪ್ಪ ಅವರು ಕಿರಣ್ ಬುಡ್ಲೆಗುತ್ತು ಪರ ಮಾತನಾಡಿರುವುದು ಎಲ್ಲರ ಗಮನ ಸೆಳೆದಿದೆ.
ಯುವ ನಾಯಕರ ಪರಿಗಣನೆಗೆ ಸಭೆಯಲ್ಲೂ ತೀರ್ಮಾನಿಸಿದ್ದು ಅದರಂತೆ ದ.ಕ. ಲೋಕಸಭಾ ಟಿಕೇಟ್ ಕಾಂಗ್ರೆಸ್ ನಿಂದ ಅಚ್ಚರಿ ಆಯ್ಕೆ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.