ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಹರಕೆ ನೇಮೋತ್ಸವ ಇಂದು ರಾತ್ರಿ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳು ಅಗೇಲು ಸೇವೆ ನಡೆಯುತ್ತಿದ್ದು, ಪ್ರತೀ ದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ್ಣುಕಾಯಿ, ಊದುಬತ್ತಿ, ಕರ್ಪೂರ, ಸೀಯಾಳ, ಎಳ್ಳೆಣ್ಣೆ, ತೆಂಗಿನ ಎಣ್ಣೆ, ಅಮೃತ, ಕಲಶ, ಬೀಡ, ಚಕ್ಕುಲಿ, ಹೂವು, ಹಾಲು ಹಾಗೂ ಹರಿಕೆ ಸಂಬಂಧ ಚಿನ್ನ, ಬೆಳ್ಳಿ, ಇತರ ವಸ್ತುರೂಪದ ಕಾಣಿಕೆಗಳನ್ನು ಸ್ವೀಕರಿಸಲಾಗುವುದು.
ಕ್ಷೇತ್ರದಲ್ಲಿ ಹರಿಕೆ ಕೋಲಕ್ಕೆ ಅವಕಾಶವಿದ್ದು, ಪ್ರತಿದಿನ ಪ್ರಾರ್ಥನೆ (ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಸಂತಾನ ಭಾಗ್ಯ, ಕೃಷಿ, ವ್ಯಾಪಾರ, ದೂರ ಪ್ರಯಾಣ ಇತ್ಯಾದಿ) ಮತ್ತು ಇತರ ಸೇವೆಗಳು ನಡೆಯುತ್ತಿದ್ದು ಊರ ಪರವೂರ ಭಕ್ತಾಭಿಮಾನಿಗಳು ಇದರ ಸದುಪಯೋಗವನ್ನು (ಮೊಬೈಲ್: 9449895111, 8296577565) ಪಡೆದುಕೊಳ್ಳಬಹುದು ಎಂದು ಮೊಕ್ತೇಸರ, ಮಾಜಿ ಸೈನಿಕ ಮತ್ತು ಹಿರಿಯ ತಾಂತ್ರಿಕ ಸಹಾಯಕ ಡಿಸಿಆರ್ ಪುತ್ತೂರು ಕೆ.ಬಾಬು ಪೂಜಾರಿ ಬಲ್ನಾಡು ತಿಳಿಸಿದ್ದಾರೆ.