ರಾಮೇಶ್ವರಂ ಕೆಫೆಯಲ್ಲಿ ನಡೆದ ನಿಗೂಢ ಬಾಂಬ್ ಸ್ಫೋಟ | ಎನ್‍ ಐ ಎ ತನಿಖೆಗೆ ಬಜರಂಗದಳ ಆಗ್ರಹ

ಪುತ್ತೂರು: ನಿನ್ನೆ ಮಧ್ಯಾಹ್ನ 12.55ರ ಸಮಯದಲ್ಲಿ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಎರಡು ಬಾರಿ ನಿಗೂಢ ಬಾಂಬ್ ಸ್ಫೋಟವಾಗಿದ್ದು, ಈ ಕುರಿತು ಪ್ರಕರಣವನ್ನು ಎನ್‍ ಐ ಎ ತನಿಖೆಗೊಳಪಡಿಸಬೇಕು ಎಂದು ಬಜರಂಗದಳ ಆಗ್ರಹಿಸಿದೆ.

ಕಳೆದ ವರ್ಷ ಹಲವು ಬಾರಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದರೂ ಈ ವರೆಗೂ ಹುಸಿ ಕರೆ ಸಂಬಂಧ ಯಾರ ಬಂಧನವೂ ಆಗಿಲ್ಲ. ಇದರ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕೈವಾಡವಿರುವ ಶಂಕೆ ಇದ್ದು, ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು ಮರೆಮಾಚಲು ಈ ಘಟನೆ ನಡೆಸಿರುವ ಸಂಶಯವಿದೆ.

ಇದೇ ರಾಮೇಶ್ವರಂ ಕೆಫೆಯಲ್ಲಿ ಅಯೋಧ್ಯೆ ಪ್ರಾಣಪ್ರತಿಷ್ಠೆಯ ದಿನ ಕಾರ್ಯಕ್ರಮ ನಡೆದಿದ್ದು ಈ ಹೋಟೆಲನ್ನು ಗುರಿಯಾಗಿಸಿಕೊಂಡು ಈ ಕೃತ್ಯ ನಡೆದಿದೆ. ಅದರಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎನ್‍ ಐ ಎ ತನಿಖೆಗೆ ಒಳಪಡಿಸಬೇಕೆಂದು ಬಜರಂಗದಳ ವಿಭಾಗ ಸಂಯೋಜಕರಾದ ಭುಜಂಗ ಕುಲಾಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top