ಮುಳಿಯ ಜ್ಯುವೆಲ್ಸ್ ನಲ್ಲಿ ಕರಿಮಣಿ ಉತ್ಸವ | ಮಾ.7 ರ ತನಕ ಕರಿಮಣಿ ಉತ್ಸವ ಮುಂದುವರಿಕೆ

ಪುತ್ತೂರು : ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನ ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಯಲ್ಲಿ ನಡೆಯುತ್ತಿರುವ ಕರಿಮಣಿ ಉತ್ಸವಕ್ಕೆ ಗ್ರಾಹಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಬೇಡಿಕೆಯ ಮೇರೆಗೆ ಮಾರ್ಚ್ 7ರ ವರೆಗೆ ಉತ್ಸವವನ್ನು ಮುಂದುವರಿಸಲಾಗಿದೆ.

ಈ ಕುರಿತು ಮುಳಿಯ ಜ್ಯುವೆಲ್ಸ್ ಪ್ರಕಟಣೆ ನೀಡಿದ್ದು, ಗ್ರಾಹಕರ ಬೇಡಿಕೆಯ ಮೇರೆಗೆ ಕರಿಮಣಿ ಉತ್ಸವವನ್ನು ಮಾರ್ಚ್ 7ರವರೆಗೆ ಮುಂದುವರಿಸುತ್ತಿರುವುದಾಗಿ ತಿಳಿಸಿದೆ.

ಆರಂಭದಲ್ಲಿ 15 ದಿನಗಳ ಕಾಲ ಮಾತ್ರ ನಡೆಸಲು ಉದ್ದೇಶಿಸಲಾಗಿದ್ದ ಕರಿಮಣಿ ಉತ್ಸವಕ್ಕೆ ಫೆ.16ರಂದು ಚಾಲನೆ ನೀಡಲಾಗಿತ್ತು. ಇದರಲ್ಲಿ ನವನವೀನ ಮಾದರಿಯ, ವಿವಿಧ ವಿನ್ಯಾಸ ಕರಿಮಣಿ ಸರಗಳು ಅತೀ ಕಡಿಮೆ ಸುಮಾರು 2 ಗ್ರಾಂ ನಿಂದ ಪ್ರಾರಂಭಿಸಿ, ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಎಲ್ಲಾ ರೀತಿಯ ಕರಿಮಣಿ ಸರಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.































 
 

ಹಳೆಯ ಕರಿಮಣಿಯನ್ನು ಹೊಸ ಡಿಸೈನ್ ಕರಿಮಣಿಯ ಜೊತೆ ಎಕ್ಸ್‌ಚೇಂಜ್ ಮಾಡಿದಾಗ ಪ್ರತಿ ಗ್ರಾಂ ಮೇಲೆ 100 ರೂ. ಅಧಿಕ ಪಡೆಯುವ ಅವಕಾಶ ಗ್ರಾಹಕರಿಗೆ ಇಲ್ಲಿ ಲಭ್ಯವಿದೆ.

1000ಕ್ಕೂ ಅಧಿಕ ವಿನ್ಯಾಸಗಳು, ದೀರ್ಘಕಾಲ ಬಾಳಿಕೆಯ ಗಟ್ಟಿಯಾದ ನಿತ್ಯ ಉಪಯೋಗಿ ಸಣ್ಣ ಕರಿಮಣಿಗಳು, 2 ಗ್ರಾಂನಿಂದ 100 ಗ್ರಾಂ ವರೆಗಿನ ಕರಿಮಣಿಗಳು ಹಾಗೂ ಕರಾವಳಿ ಶೈಲಿಯ ಮತ್ತು ಹೊಸ ಹೊಸ ಟ್ರೆಂಡಿ ಡಿಸೈನ್‌ಗಳು ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top