ಪುತ್ತೂರು: ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ 8ನೇ ವರ್ಷದ ‘ನರ್ತನಾವರ್ತನ’ ಭರತನಾಟ್ಯ ಕಾರ್ಯಕ್ರಮ ಮಾ.3 ಭಾನುವಾರ ಬಪ್ಪಳಿಗೆ ಜೈನಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ವಿದುಷಿ ಪ್ರೀತಿಕಲಾ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಏಳು ವರ್ಷಗಳಿಂದ ದೇಶ ವಿದೇಶದ ಹೆಸರಾಂತ ಕಲಾವಿದರನ್ನು ಕರೆಸಿ ‘ನರ್ತನಾವರ್ತನ’ ಕಾರ್ಯಕ್ರಮದ ಮೂಲಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ಪಿ.ಪ್ರವೀಣ್ ಕುಮಾರ್ ಬೆಂಗಳೂರು ಅವರಿಂದ ಸಂಜೆ 5.30 ರಿಂದ ‘ಸಖ’ ಎಂಬ ಭರತನಾಟ್ಯ ಪ್ರಸ್ತುತಿಗೊಳ್ಳಲಿದೆ. ಅವರಿಗೆ ನಟುವಾಂಗದಲ್ಲಿ ಕೆ.ಎನ್.ನವ್ಯಶ್ರೀ ಬೆಂಗಳೂರು, ಹಾಡುಗಾರಿಕೆಯಲ್ಲಿ ಆರ್.ರಘುರಾಮ್ ಬೆಂಗಳೂರು, ಮೃದಂಗದಲ್ಲಿ ಭವಾನಿಶಂಕರ್ ಬೆಂಗಳೂರು, ಕೊಳಲಿನಲ್ಲಿ ರಘುಸಿಂಹ ಬೆಂಗಳೂರು ಸಾಥ್ ನೀಡಲಿದ್ದಾರೆ. ಮಂಗಳೂರಿನ ದೇವ್ ಪ್ರೋ ಸೌಂಡ್ಸ್ ಧ್ವನಿ ಮತ್ತು ಬೆಳಕು ಹಾಗೂ ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ರಂಗಾಲಂಕಾರದಲ್ಲಿ ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತರಾದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೀಪ ಬೆಳಗಿಸುವ ಮೂಲಕ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಡಾ.ಸುಧಾ ಶ್ರೀಪತಿ ರಾವ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪರ್ಲಡ್ಕ ಎಸ್ ಡಿ ಪಿ ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ನ ಆಡಳಿತ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ಅವರಿಗೆ ಕಲಾಶ್ರಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಉಪಸ್ಥಿತರಿದ್ದರು.