ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ ನಿಧನ

ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ (52) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೊಡಪ್ಪಾಡಿಗುತ್ತು ತರವಾಡಿನ ಪ್ರಧಾನ ಜಠಾಧಾರಿ ದೈವದ ನರ್ತಕರಾಗಿದ್ದು ಒಳಮೊಗ್ರು ಗ್ರಾಮದ ಅನೇಕ ಕಡೆ ದೈವ ಚಾಕರಿಯಲ್ಲಿ ತನ್ನನ್ನು ಸಮರ್ಪಿಸಿಕೊಂಡಿದ್ದರು. ಇವರನ್ನು ಕಳೆದ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ಗೌರವಿಸಲಾಗಿತ್ತು. ಒಳಮೊಗ್ರು ಗ್ರಾಮ ಪಂಚಾಯಿತಿ ಕೂಡ ಅವರನ್ನು ಗೌರವಿಸಿತ್ತು.  ಸ್ಥಳೀಯ ಶ್ರೀ ವೀರಕೇಸರಿ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ದೈವ ನರ್ತನದಲ್ಲಿ ಅವರ ಸೇವೆಯನ್ನು ಪರಿಗಣಿಸಿ ಗೌರವಿಸಲಾಗಿತ್ತು.

ಮೃತರ ಮನೆಗೆ ಮೊಡಪ್ಪಾಡಿಗುತ್ತು ಕುಟುಂಬಸ್ಥರು, ಜನಪ್ರತಿನಿಧಿಗಳು, ಗಣ್ಯರು, ಊರ ಪರವೂರ ಮಹನೀಯರು ಭೇಟಿ ನೀಡಿ ಸಂತಾಪ ಸೂಚಿಸಿದರು. ಮೃತರು ಪತ್ನಿ, ಓರ್ವ ಪುತ್ರ , ಓರ್ವ ಪುತ್ರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.



































 
 

ಸಂತಾಪ :

ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ಶ್ರೀ ದೇವರಿಗೆ ಬೆಳ್ಳಿ ಸಮರ್ಪಣೆ ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಹಿತೈಷಿಯಾಗಿದ್ದ ದೈವ ನರ್ತಕ ಬೊಳಿಯ ರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನ ಪ್ರಾರ್ಥನೆ ಮೂಲಕ ಸಂತಾಪ ಸೂಚಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top