ಪಾಕಿಸ್ತಾನ ಬಿಜೆಪಿ ಗೆ ಶತ್ರುದೇಶ, ನಮಗಲ್ಲ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಬಿಜೆಪಿಗೆ ಪಾಕಿಸ್ತಾನವು ಶತ್ರು ದೇಶ ಆಗಿರಬಹುದು, ಆದರೆ ಕಾಂಗ್ರೆಸ್ ಅದನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ರಾಜ್ಯ ವಿಧಾನಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ವಿಧಾನ ಪರಿಷತ್‌ ಕಪಾಲದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲಿನ ಚರ್ಚೆಯ ವೇಳೆ ಮಾತನಾಡಿರುವ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪರಿಷತ್ತಿನಲ್ಲಿ ನಡೆದ ಚರ್ಚೆಯ ವೇಳೆ ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶತ್ರು ದೇಶ ಎಂದರೆ ಬಿಜೆಪಿ ಪ್ರಕಾರ ಪಾಕಿಸ್ತಾನ. ಆದರೆ, ನಮಗೆ ಅದು ಶತ್ರು ದೇಶವಲ್ಲ ನೆರೆಯ ದೇಶ ಮಾತ್ರ ಎಂದು ಹೇಳಿದರು. ಈ ಹೇಳಿಕೆ ಬೆನ್ನಲ್ಲೇ ಹಲವಾರು ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಹರಿಪ್ರಸಾದ್ ಅವರ ಹೇಳಿಕೆ ಕಾಂಗ್ರೆಸ್‌ ಪಾಕಿಸ್ತಾನದ ಬಗ್ಗೆ ಮೃದುತ್ವವನ್ನು ತೋರಿಸುತ್ತಿರುವುದು ಸಾಬೀತುಪಡಿಸುತ್ತಿದೆ ಎಂದರು ಹೇಳಿದರು.

ಈ ನಡುವೆ ತಮ್ಮ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, ಬಿಜೆಪಿ ಪಕ್ಷಕ್ಕೂ ಪಾಕಿಸ್ತಾನದ ನೆಂಟಸ್ತನಕ್ಕೂ ಹಲವು ದಶಕಗಳ ಇತಿಹಾಸವಿದೆ. ಪಾಕಿಸ್ತಾನದ ಜಪ ಮಾಡದೆ ಬಿಜೆಪಿ ಚುನಾವಣೆ ಎದುರಿಸಿದ ಇತಿಹಾಸವೇ ಇಲ್ಲ. ಪಾಕಿಸ್ತಾನದ ಮೇಲೆ ಬಿಜೆಪಿಗೆ ನಿಜಕ್ಕೂ ರೋಷ, ವೇಷ ಇದ್ದರೆ “ಶತ್ರುರಾಷ್ಟ್ರ” ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.































 
 

ಒಕ್ಕೂಟ ಭಾರತವನ್ನು ಇಬ್ಬಾಗ ಮಾಡಿದ ಮೊಹಮ್ಮದ್ ಅಲಿ ಜಿನ್ನಾಗೆ “ಜಾತ್ಯಾತೀತ ನಾಯಕ”ಎಂದು ಬಿರುದು ನೀಡಿ, ಸಮಾಧಿ ಎದುರು ಕಣ್ಣೀರು ಸುರಿಸಿದ ಲಾಲ್ ಕೃಷ್ಣ ಅಡ್ವಾನಿ ಯಾವ ಪಕ್ಷದವರು? ಭಯೋತ್ಪಾದನೆಗೆ ತಲೆ ಬಾಗುವುದಿಲ್ಲ ಎಂದು ಚುನಾವಣೆಯ ಭಾಷಣ ಬೀಗಿದ್ದ ನರೇಂದ್ರ ಮೋದಿಯವರು, ಪಾಕಿಸ್ತಾನದ ಪ್ರಧಾನಿಯ ಮೊಮ್ಮಗಳ ಮದುವೆಗೆ ಆಹ್ವಾನವೇ ಇಲ್ಲದೆ, ರಹಸ್ಯವಾಗಿ ಬಿರಿಯಾನಿ ತಿಂದು ಬಂದಿದ್ದು ನೆಂಟಸ್ತನ ಅಲ್ಲವೇ? ಪಾಕಿಸ್ತಾನವನ್ನು ‘ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರವೆಂದು ಘೋಷಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮಂಡಿಸಿದ್ದ ಖಾಸಗಿ ಮಸೂದೆಯನ್ನು ವಾಪಾಸ್ ಪಡೆದಿದ್ದು ಯಾಕೆ? 56 ಇಂಚಿನ ಎದೆಯಲ್ಲಿ ದೈರ್ಯವೇ ಇರಲಿಲ್ವೇ? ಯಾರ ಒತ್ತಡದಿಂದ ಮಸೂದೆ ವಾಪಾಸ್ ಪಡೆಯಲಾಯಿತು? ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವ ಸಕ್ಕರೆ ಸೇರಿದಂತೆ ಎಲ್ಲಾ ವ್ಯವಹಾರವನ್ನು ನಿಲ್ಲಿಸಲು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧೈರ್ಯ ಇದ್ಯಾ? ಬೀದಿಯಲ್ಲಿ ನಿಂತು ಬೊಬ್ಬೆ ಹಾಕುತ್ತಿರುವ ಬಿಜೆಪಿ, ಪಾಕಿಸ್ತಾನದ ನೆಂಟಸ್ತನದಿಂದ ರಾಜಕೀಯ ಬೇಳೆ ಬೆಳೆಸುತ್ತಿರುವುದು ಪುಲ್ವಾಮ ದಾಳಿಯಲ್ಲೇ ಸಾಬೀತಾಗಿದೆ. ರಾಜ್ಯದ ಜನರನ್ನ ಮೂರ್ಖರನ್ನಾಗಿ ಮಾಡಲು ಹೋಗಿ, ಮುಖವಾಡ ಬಯಲಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top