ವಿಟ್ಲ: ತಾಲೂಕಿನ ಕಲ್ಲಡ್ಕ ವಲಯದ ಗೋಳ್ತಮಜಲು ಕಾರ್ಯಾಕ್ಷೇತ್ರದಲ್ಲಿ ಮೂರು ತಿಂಗಳ ಕಾಲ ಜ್ಞಾನ ವಿಕಾಸ ಕಾರ್ಯಾಕ್ರಮದಡಿ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಿತು.
ವಲಯ ಅಧ್ಯಕ್ಷೆ ತುಳಸಿ ದೀಪ ಬೆಳಗಿಸಿ ಕಾರ್ಯಾಕ್ರಮ ಉದ್ಘಾಟಿಸಿದರು. ಮೇಲ್ವಿಚಾರಕಿ ಸುಗುಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶ ಹಾಗೂ ಹೊಲಿಗೆ ಕಲಿಕೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷ ಸೀತಾರಾಮ ಶೆಟ್ಟಿ ಹೊಲಿಗೆ ತರಬೇತಿಯಿಂದಾಗಿ ನೀವು ಇನ್ನಷ್ಟು ಪ್ರಯೋಜನ ಪಡೆಯುವಂತಾಗಬೇಕು ಎಂದರು.
ಸೇವಾ ಪ್ರತಿನಿಧಿ ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷಿ ಸ್ವಾಗತಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಶಾರದಾ ವಂದಿಸಿದರು.