ಗ್ರಾಮ ಸಾಹಿತ್ಯ ಸಂಭ್ರಮ ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಕಡೆಗೆ ಒಲವು ಮೂಡಿಸುವ ಸ್ತುತ್ಯಾರ್ಹ ಕಾರ್ಯಕ್ರಮ : ಬಿ. ವೆಂಕಟರಮಣ ಬೋರ್ಕರ್ | ಸಾಹಿತ್ಯ ನಡಿಗೆ ಗ್ರಾಮದ ಕಡೆಗೆ ಸರಣಿ ಕಾರ್ಯಕ್ರಮ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ನೇತೃತ್ವದಲ್ಲಿ, ಶಿಕ್ಷಣಾಧಿಕಾರಿಗಳ ಕಛೇರಿ, ನಿಡ್ಪಳ್ಳಿ ಗ್ರಾಮ ಪಂಚಾಯಿತಿ ಸಹಕಾರದಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ  ಕಾರ್ಯಕ್ರಮ 13, ನಿಡ್ಪಳ್ಳಿ ಸಮುದಾಯ ಭವನದಲ್ಲಿ ನಡೆಯಿತು.

ನಿಡ್ಪಳ್ಳಿ ಗ್ರಾಪಂ ಅಧ್ಯಕ್ಷ ಬಿ.ವೆಂಕಟರಮಣ ಬೋರ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಒಲವು ಹೆಚ್ಚಾಗಲು  ಗ್ರಾಮ ಸಾಹಿತ್ಯ ಸಂಭ್ರಮ ಸ್ತುತ್ಯಾರ್ಹ ಕಾರ್ಯಕ್ರಮವಾಗಿದೆ. ಮಕ್ಕಳು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಾಡಿನ ಭಾಷೆಯನ್ನು ಉಳಿಸುವವರಾಗಬೇಕೆಂದು ಹೇಳಿದರು.

ಸರ್ವಾಧ್ಯಕ್ಷತೆ ವಹಿಸಿದ್ದ ರಕ್ಷಿತಾ ಬಿ. ಮಾತನಾಡಿ, ಸಾಹಿತ್ಯ ಸಮ್ಮೇಳನದ  ಸ್ವರೂಪ ಪಡೆದು ಸರಳವಾಗಿ ಪರಿಣಾಮಕಾರಿಯಾಗಿ ನಡೆಯುತ್ತಿರುವ ಈ ಗ್ರಾಮ ಸಾಹಿತ್ಯ ಸಂಭ್ರಮವು ಗ್ರಾಮೀಣ ಮಕ್ಕಳನ್ನು ಸಾಹಿತ್ಯ ಲೋಕಕ್ಕೆ ಬರಮಾಡಿಕೊಳ್ಳುವಲ್ಲಿ  ಪೂರಕವಾಗಿದೆ  ಎಂದರು.































 
 

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಹಿತ್ಯ ವೇದಿಕೆಯನ್ನು ನೀಡುವುದು  ಹಾಗೂ  ಗ್ರಾಮದ ಸಾಧಕರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ  ಸಾಹಿತ್ಯ ಪರಿಷತ್ ಗ್ರಾಮ ಗ್ರಾಮಕ್ಕೆ ಬಂದು ಜನಸಾಮಾನ್ಯರನ್ನು ತಲಪುವ ಕಾರ್ಯಕ್ರಮವೇ ಗ್ರಾಮ ಸಾಹಿತ್ಯ ಸಂಭ್ರಮ ಎಂದರು.

ಮುಖ್ಯ ಅತಿಥಿಗಳಾಗಿ ನಿಡ್ಪಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಗೀತಾ. ಡಿ , ಅಭಿವೃದ್ಧಿ ಅಧಿಕಾರಿ ಸಂಧ್ಯಾಲಕ್ಷ್ಮಿ, ಬೆಟ್ಟಂಪಾಡಿ ಸಿ. ಆರ್. ಪಿ. ಪರಮೇಶ್ವರಿ ಪ್ರಸಾದ್ ಶುಭ ಹಾರೈಸಿದರು.

ಮುಂಡೂರು ಸ.. ಹಿ. ಪ್ರಾ ಶಾಲೆ ವಿದ್ಯಾರ್ಥಿನಿ ಶ್ರೀಜ ಕೆ. ಸಮಾರೋಪ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿಡ್ಪಳ್ಳಿ ಗ್ರಾಮಕ್ಕೆ ಸಂಬಂಧಪಟ್ಟಂತೆ ಡಾ. ಸದಾಶಿವ ಭಟ್ ಪಳ್ಳು , ರಘುನಾಥ ರೈ ನುಳಿಯಾಲು , ಜನಾರ್ಧನ ದುರ್ಗ , ಆಸೀಫ್ ತಂಬುತ್ತಡ್ಕ , ಭವ್ಯಾ. ಪಿ. ಆರ್. ನಿಡ್ಪಳ್ಳಿ,, ಚಿತ್ರಾ. ಎಸ್., ಸಮನ್ವಿ. ರೈ. ನುಳಿಯಾಲು  ಸಾಧಕರನ್ನು ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಭಿನಂದಿಸಿ  ಶುಭ ಹಾರೈಸಿದರು.

ಚಿಗುರೆಲೆ ಬಳಗದ ಸದಸ್ಯೆ ಚಿತ್ರಾ. ಎಸ್‍. ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ವಾಹಕಿ ಅಪೂರ್ವ ಕಾರಂತ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯರಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿದರು.  ಶ್ರೀ ಚಂದ್ರ ಮೌಳಿ ಕಡಂದೇಲು ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯಕ್ಕೆ ನಿಡ್ಪಳ್ಳಿ ಗ್ರಾಮದ ಕೊಡುಗೆ ವಿಷಯ ಕುರಿತು ಲೇಖಕ, ಚಿಂತಕ ನುಳಿಯಾಲು ರಾಧಾಕೃಷ್ಣ ರೈ  ಮಾತನಾಡಿದರು. ಕನ್ನಡದಲ್ಲೂ ಐ ಎ ಎಸ್ ಬರೆಯಿರಿ ಅಭಿಯಾನ ವಿಷಯ ಮಾಹಿತಿ ಕುರಿತು ಕ. ಸಾ. ಪ. ಪುತ್ತೂರು, ಐ ಎ ಎಸ್ ದರ್ಶನದ ಪ್ರೇರಕ ಪ್ರಣವ್ ಭಟ್ ರಿಂದ ಮಾಹಿತಿ ನೀಡಿದರು.

ಬಳಿಕ ವಿದ್ಯಾರ್ಥಿಗಳಿಂದ ನಡೆದ ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಪ್ರವಾಸ ಕಥನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಾಲ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ. ಪಿ. ಆರ್. ನಿಡ್ಪಳ್ಳಿ , ಬಾಲ ಕಥಾಗೋಷ್ಠಿ ಅಧ್ಯಕ್ಷತೆಯನ್ನು ಬೆಟ್ಟಂಪಾಡಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ , ಸಾರ್ವಜನಿಕ ವಿಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಾ. ಉ. ಹಿ. ಪ್ರಾ. ಶಾಲೆ ಶಿಕ್ಷಕ ಜನಾರ್ಧನ ದುರ್ಗ ವಹಿಸಿದ್ದರು. ಯುವ ಕವಿಗೋಷ್ಠಿಯಲ್ಲಿ ಸಮನ್ವಿ ರೈ ನುಳಿಯಾಲು, ಶೋಭಾ ಕಾಟುಕುಕ್ಕೆ, ಭಾವನಾ. ಕೆ. ಜೆ., ಸುಜಯ ಸ್ವರ್ಗ, ಆನಂದ ರೈ ಅಡ್ಕಸ್ಥಳ, ಅಪೂರ್ವ ಕಾರಂತ್ ದರ್ಬೆ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top