ಪುತ್ತೂರು: ವಿವೇಕಾನಂದ ಶಿಶು ಮಂದಿರದಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬದ ಆಚರಣೆ, ಮಾತೃವಂದನ, ಸಾಮೂಹಿಕ ಭೋಜನ ಕಾರ್ಯಕ್ರಮ ಜರುಗಿತು.

ಮಕ್ಕಳು ತಮ್ಮ ತಾಯಿಯ ಪಾದಪೂಜೆ ನೆರವೇರಿಸಿದ ನಂತರ ತಾಯಂದಿರು ತಮ್ಮ ಮಕ್ಕಳಿಗೆ ಆರತಿ ಬೆಳಗಿ ಸಿಹಿ ತಿನ್ನಿಸಿ ಆಶೀರ್ವಾದಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ ಪೈ ವಹಿಸಿದ್ದರು.
ಉಪನ್ಯಾಸಕ, ದೈವನರ್ತಕ ಡಾ. ರವೀಶ ಪಡುಮಲೆ ಅಭ್ಯಾಗತರಾಗಿ ಪಾಲ್ಗೊಂಡು, ವಿವೇಕಾನಂದ ಶಿಶು ಮಂದಿರದ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ. ಎಳೆಯ ಮಕ್ಕಳಿಗೆ ಬಾಲ್ಯದಲ್ಲಿ ಕೊಡುವ ಈ ಸಂಸ್ಕಾರವು ಮಕ್ಕಳ ಭವಿಷ್ಯವನ್ನು ಉತ್ತಮ ಗೊಳಿಸುವುದರಲ್ಲಿ ಸಹಾಯವಾಗಲಿದೆ ಎಂದರು.
ಶಿಶು ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ರಾಜಗೋಪಾಲ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶು ಮಂದಿರದ ಮಾತಾಜಿಯವರು, ಆಡಳಿತ ಮಂಡಳಿ ಸದಸ್ಯರು, ಮಕ್ಕಳ ಪಾಲಕರು ಭಾಗವಹಿಸಿದ್ದರು.