ಸುಳ್ಯ: ಮಂಗಳೂರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಹೈದರಾಬಾದ್ ರಾಷ್ಟೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿ ಸಹಯೋಗದಲ್ಲಿ ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮ ಉಬರಡ್ಕ ಗ್ರಾಮದ ಪ್ರಗತಿಪರ ಜೇನು ಕೃಷಿಕ ಪುಟ್ಟಣ್ಣ ಗೌಡರ ತೋಟದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಪಂ ಮಹಾ ಒಕ್ಕೂಟದ ಅಧ್ಯಕ್ಷ ಹರೀಶ್ ಉಬರಡ್ಕ, ಪಾಲ್ಗೊಂಡು, ರೈತರು ತಮ್ಮ ಸುಸ್ಥಿರ ಅಭಿವೃದ್ದಿಗಾಗಿ ಜೇನು ಕೃಷಿಯಂತಹ ಉಪ ಕಸುಬುಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಪುಟ್ಟಣ್ಣ ಗೌಡ ರವರು ಜೇನು ಕೃಷಿಯಲ್ಲಿ ತಮ್ಮ ಅನುಭವ ಮತ್ತು ಶಿಬಿರಾರ್ಥಿಗಳಿಗೆ ಜೇನು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕೃಷಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ತೇಜಸ್ವಿ ಕುಮಾರ ಮಾರುಕಟ್ಟೆ ವ್ಯವಸ್ಥೆ ಕುರಿತು ಮಾಹಿತಿಯನ್ನು ನೀಡಿದರು. ಮಂಗಳೂರು ಕೆವಿಕೆ ವಿಜ್ಞಾನಿ ಡಾ. ಕೇದಾರನಾಥ, ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಸಂದೀಪ, ಗಿರಿದಾಸ ಹಾಗೂ 25 ಕೃಷಿಕರು ಭಾಗವಹಿಸಿದರು.