ಬೆಳ್ತಂಗಡಿ : ಅರಣ್ಯಕ್ಕೆ ಟ್ರಕ್ಕಿಂಗ್ಗೆ ಹೋದ ಯುವಕರು ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರು ಮೂಲದ ಮೂವರು ಯುವಕರು, ನಿನ್ನೆ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಅರಣ್ಯ ವ್ಯಾಪ್ತಿಯ ದುರ್ಗದಹಳ್ಳಿಯಿಂದ ಚಾರಣಕ್ಕೆ ತೆರಳಿದ್ದರು. ರಾತ್ರಿ ವೇಳೆಗೆ ಇಬ್ಬರು ಯುವಕರು ನಾಪತ್ತೆ ಆಗಿದ್ದಾರೆ. ಓರ್ವ ಯುವಕ ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು, ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್ ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಆ ಪ್ರದೇಶದಲ್ಲಿ ಆನೆ ಸಂಚಾರ ಹೆಚ್ಚಿದೆ ಎನ್ನಲಾಗುತ್ತಿದೆ.