ಪುತ್ತೂರು: ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ನ ಆವಣದಲ್ಲಿ ಸಂಭ್ರಮಿಸುತ್ತಿರುವ 20ನೇ ವರ್ಷದ ಎಸ್‌ಡಿಪಿ ಕಲೋಪಾಸನಾ -2024 ಸಾಂಸ್ಕೃತಿಕ ಕಲಾ ಸಂಭ್ರಮದ ಎರಡನೇ ದಿನವಾದ ಭಾನುವಾರ ಸಂಜೆ “ಹರೇ ರಾಮ ಹರೇ ಕೃಷ್ಣ” ವಿನೂತನ ಭರತನಾಟ್ಯ ಪ್ರದರ್ಶನ ಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಂಗಳೂರು ಕೆಎಂಸಿ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ| ಸಿ.ಕೆ ಬಲ್ಲಾಳ್ ಮಾತನಾಡಿ, ಭರತನಾಟ್ಯವು ಮನರಂಜನೆಯ ಜೊತೆಗೆ ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಮೆದುಳು ಕ್ರಿಯಾತ್ಮಕ ವಾಗುತ್ತದೆ. ನೃತ್ಯ ಬಂಗಿಗಳು ಎಲ್ಲಾ ಭಾಗಗಳೂ ಸಕ್ರೀಯವಾಗುತ್ತದೆ. ಒತ್ತಡಗಳು ನಿವಾರಣೆಯಾಗಿ ಮನಸ್ಸಿಗೂ ಮುದ ನೀಡುತ್ತದೆ. ನೃತ್ಯ ಪಟುಗಳು ಹಂತ ಹಂತವಾಗಿ ತರಬೇತಿ ಪಡೆಯುತ್ತಾ ಉತ್ತಮ ಪ್ರತಿಭೆಗಳಾಗಿ ಹೊರ ಹೊಮ್ಮತ್ತಾರೆ. ನಂತರ ವೇದಿಕೆಯಲ್ಲಿ ಉತ್ತಮ ಕಲಾ ಪ್ರದರ್ಶನ ನೀಡುತ್ತಾರೆ ಎಂದ ಅವರು, ಇಪ್ಪತ್ತು ವರ್ಷಗಳಿಂದ ಕಲಾ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಡಾ| ಹರಿಕೃಷ್ಣ ಪಾಣಾಜೆಯ ಸೇವೆಯನ್ನು ಶ್ಲಾಘಿಸಿದರು.
ಸಂಸ್ಥೆಯ ನಿರ್ದೇಶಕ ಡಾ| ಹರಿಕೃಷ್ಣ ಪಾಣಾಜೆ, ರೂಪಲೇಖ ಡಾ. ಮೇಘನಾ ಪಾಣಾಜೆ ಹಾಗೂ ಡಾ. ಕೇದಾರ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಪ್ರಿನ್ಸಿಪಾಲ್ ಮಾಧವ ಭಟ್ ಸ್ವಾಗತಿಸಿ, ವಂದಿಸಿದರು.
ವೆಬ್ ಸೈಟ್, ಇ-ಕಾಮರ್ಸ್ ಅನಾವರಣ: ಎಸ್ ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನ ಎಲ್ಲಾ ಆಯುರ್ವೇದ ಉತ್ಪನ್ನಗಳು ಆನ್ ಲೈನ್ ನಲ್ಲಿ ದೊರೆಯಲಿದ್ದು ಇದರ ವೆಬ್ ಸೈಟ್ Sdp.ayurveda.com ಹಾಗೂ shop.sdpayurveda.com ಇ-ಕಾಮರ್ಸ್ ನ್ನು ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ವೆಬ್ ಸೈಟ್ ನ್ನು ಸುಶ್ರುತ ಆಯುರ್ವೇದ ಆಸ್ಪತ್ರೆಯ ಡಾ| ರವಿಶಂಕರ್ ಪೆರ್ವಾಜೆ ಅನಾವರಣ ಗೊಳಿಸಿದರು. ಡಾ. ಜಯಶ್ರೀ ಪೆರ್ವಾಜೆಯವರು ಇ-ಕಾಮರ್ಸ್ ನ್ನು ಅನಾವರಣಗೊಳಿಸಿದರು. ವೆಬ್ ಸೈಟ್ ಹಾಗೂ ಇ-ಕಾಮರ್ಸ್ ನ್ನು ವೆಬ್ ಪೀಪಲ್ ನಿರ್ಮಿಸಿರುತ್ತಾರೆ. ಡಾ| ಹರಿಕೃಷ್ಣ ಪಾಣಾಜೆ, ರೂಪಲೇಖ ಹಾಗೂ ವೆಬ್ ಪೀಪಲ್ ನ ಶರತ್ ಉಪಸ್ಥಿತರಿದ್ದರು. ಡಾ. ಮೇಘನಾ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭರತನಾಟ್ಯ ಭರತಾಂಜಲಿ ನೃತ್ಯ ಸಂಸ್ಥೆಯವರಿಂದ ಅನಿತಾ ಗುಹಾ ಚೆನ್ನೈ ನಿರ್ದೇಶನದಲ್ಲಿ `ಹರೇ ರಾಮ ಹರೇ ಕೃಷ್ಣಾ’ ಎಂಬ ಭರತನಾಟ್ಯ ನೃತ್ಯಗಾಥಾ ವಿಶೇಷ ಕಾರ್ಯಕ್ರಮ ನಡೆಯಿತು.