ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಯಲ್ಲಿ 49ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ನಡೆಯಿತು.
ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಕಳೆದ 48 ವರ್ಷಗಳಿಂದ ಬೈದೆರುಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯುವುದರ ಜತೆಗೆ ಊರಿನ ಎಲ್ಲಾ ಸಮುದಾಯದವರು ಕ್ಷೇತ್ರದ ಭಕ್ತರಾಗಿ ಕ್ಷೇತ್ರ ಅಭಿವೃದ್ಧಿಯಾಗಿದೆ. ತೊಂದರೆಗೊಳಗಾದವರಿಗೆ ಕೋಟಿ-ಚೆನ್ನಯರ ಅಭಯ ನೀಡಿದೆ. ಇಲ್ಲಿ ಬೇರೆ ಬೇರೆ ಜಾತಿಯವರು, ಬೇರೆ ಬೇರೆ ಧರ್ಮದವರು ಕೋಟಿ-ಚೆನ್ನಯರನ್ನು ಆರಾಧನೆ ಮಾಡುತ್ತಿದ್ದಾರೆ. ಮುಂದಿನ ವರ್ಷ 50ನೇ ವರ್ಷದ ನೇಮೋತ್ಸವ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಜಾತಿಯವರನ್ನು ಸೇರಿಸಿಕೊಂಡು ನೇಮೋತ್ಸವವನ್ನು ವಿಜೃಂಭಣೆಯಿಂದ ನಡೆಸುವ ಇರಾದೆಯಿದ್ದು, ಪುತ್ತೂರು ಬಿಲ್ಲವ ಸಂಘದ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಮಾಜಿ ಸಿಂಡಿಕೇಟ್ ಸದಸ್ಯ ವಿಜಯ ಕುಮಾರ್ ಸೊರಕೆ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ನೇಮೋತ್ಸವ ವಿಜೃಂಭಣೆಯಿಂದ ನಡೆದುಕೊಂಡು ಬಂದಿದ್ದು, ಊರಿನ ಸಹಿತ ಪರವೂರ ಭಕ್ತಾದಿಗಳ ಸಹಕಾರ ಎದ್ದು ಕಾಣುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮೂರು ಪ್ರತಿಭೆಗಳಾದ ಏಷ್ಯಾ ಬುಕ್ ಆಫ್ ರೆಕಾರ್ಡ್‍ಮಾಡಿದ ವಿದ್ಯಾರ್ಥಿನಿ ರಾಶಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಪ್ತಮಿ ಪಿ.ಬಿ. ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾದ ವರ್ಷಾ ಪಿ.ವಿ. ಅವರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಮುಖ್ಯ ಅರ್ಚಕ ಈಶ್ವರಚಂದ್ರ ಭಟ್, ಬೆಳಂದೂರು ಗ್ರಾಪಂ ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯೆ ತೇಜಾಕ್ಷಿ ಕೊಡಂಗೆ, ಅಭಿವೃದ್ಧಿ ಅಧಿಕಾರಿ ನಾರಾಯಣ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಆಡಳಿತ ಸಮಿತಿ ಗೌರವಾಧ್ಯಕ್ಷ ಧರ್ಮಪಾಲ್ ಜೈನ್ ಬೆಳಂದೂರು ಗುತ್ತು, ಅಧ್ಯಕ್ಷ ಬಿ.ಎ.ವಸಂತ ಪೂಜಾರಿ ಕೆಲಂಬೀರಿ, ಕೋಶಾಧಿಕಾರಿ ಅಣ್ಣಿ ಪೂಜಾರಿ ಸೌತೆಮಾರು, ಮೊಕ್ತೇಸರರಾದ ಬಾಬು ಪೂಜಾರಿ ಕೆಲಂಬೀರಿ, ಶ್ರೀಧರ ಸಾಲಿಯಾನ್ ಕೆಲಂಬೀರಿ, ಆಡಳಿತ ಸಮಿತಿ ಕಾರ್ಯದರ್ಶಿ ಸದಾನಂದ ಎಸ್. ಸೌತೆಮಾರು, ಜತೆ ಕಾರ್ಯದರ್ಶಿ ಪಿ.ಆರ್.ಪುರುಷೋತ್ತಮ ಬರೆಪ್ಪಾಡಿ, ಸದಸ್ಯರಾದ ಸತೀಶ್ ಮಾರ್ಕಾಜೆ, ಮನೋಜ್ ಕೆಲಂಬೀರಿ, ಸಂತೋಷ್ ಕುಮಾರ್ ಮರಕ್ಕಡ, ಶ್ರೀಧರ ಸುವರ್ಣ ಎರ್ಮೆತ್ತಿಮಾರು, ಜಯಂತ ಸುವರ್ಣ ಕೆಲಂಬೀರಿ, ಜನಾರ್ದನ ಪೂಜಾರಿ ಕೆಲಂಬೀರಿ ಹಾಗೂ ಕೋಟಿ-ಚೆನ್ನಯ ಕರಸೇವಾ ಸಮಿತಿ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕೆಲಂಬೀರಿ ಉಪಸ್ಥಿತರಿದ್ದರು.
ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 7 ರಿಂದ ಕೊಡಮಂತಾಯ ದೈವದ ನೇಮೋತ್ಸವ, 10 ಕ್ಕೆ ಹರಿಕೆ ಮತ್ತು ಬಟ್ಟಲು ಕಾಣಿಕೆ ಗಂಧ ಪ್ರಸಾದ, ಮಧ್ಯಾಹ್ನ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಂಜೆ 4 ಕ್ಕೆ ಶ್ರೀ ಬ್ರಹ್ಮ ಬೈದೆರುಗಳ ಭಂಡಾರ ತೆಗೆಯಲಾಯಿತು. 7 ಕ್ಕೆ ಕುದ್ಮಾರು, ಬರೆಪ್ಪಾಡಿ, ಬೆಳಂದೂರು ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈವಿದ್ಯ ನಡೆಯಿತು. ರಾತ್ರಿ 8.30 ರಿಂದ ಗಂಧ ಪ್ರಸಾದ ವಿತರಣೆ, 9 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. 9.30 ಕ್ಕೆ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಇಳಿದು, 10ಕ್ಕೆ ಸುಡುಮದ್ದು ಸೇವೆ, 1 ರಿಂದ ಮಾಣಿ ಬಾಲೆ ಗರಡಿ ಇಳಿದು, 4 ಕ್ಕೆ ಬೈದೆರುಗಳ ಪಾತ್ರಿಗಳ ಸೇಠ್ ನಡೆಯಿತು.