ಪೆರ್ಲ: ಪೆರ್ಲ ಚೆಕ್ ಪೋಸ್ಟ್ ಬಳಿ ಕಾಸರಗೋಡು ಅಬಕಾರಿ ಇಲಾಖೆಯ ವಿಶೇಷ ತನಿಖಾ ದಳ ನಡೆಸಿದ ತಪಾಸಣೆಯಲ್ಲಿ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಗಾಂಜ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಕರ್ನಾಟಕ ಭಾಗದಿಂದ ಬಂದ ಕೆ ಎಲ್ 14 ಎಸಿ 0211 ನೋಂದಣಿಯ ಪಿಕಪ್ ವಾಹನದಲ್ಲಿ ಪ್ಯಾಕೆಟ್ ಗಳಲ್ಲಿ ಗಾಂಜಾ ಸಾಗಿಸುವ ಪ್ರಯತ್ನ ನಡೆದಿತ್ತು. ಅನಾಮಧೇಯ ಮಾಹಿತಿ ಮೇರೆಗೆ ಎಕ್ಸೈಸ್ ಎನ್ಫೋರ್ಸ್ ಮೆಂಟ್ ನಾರ್ಕೋಟಿವ್ ಸ್ಪೇಷಲ್ ಸೆಲ್ ಸಿಐ ಅಮಲ್ ರಾಜ್, ಡಿಸಿ ಜಯರಾಜ್, ಸಾಜನ್, ಪ್ರಜೀತ್, ಮಂಜುನಾಥ್, ಸಂದೇಶ್ ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿದ ಗಾಂಜಾದ ಮೌಲ್ಯ 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.