ಪೆರ್ನೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ವಿಟ್ಲಪೆರ್ನೆ ವಲಯದ ವತಿಯಿಂದ ಕೆಮ್ಮನ್ ಪಲ್ಕೆ, ಪೆರ್ಲಾಪು ಎ ಮತ್ತು ಪೆರ್ಲಾಪು ಬಿ ಒಕ್ಕೂಟ ಹಾಗೂ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರಾಯೋಜಕತ್ವದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ ಪೆರ್ಲಾಪು ರೋಟರಿ ಸಮುದಾಯ ಸಭಾಭವನದಲ್ಲಿ ನಡೆಯಿತು.
ಕಡೇಶಿವಾಲಯ ರೋಟರಿ ಸಮುದಾಯದಳದ ಅಧ್ಯಕ್ಷ ಕಿಶೋರ್ ಕುಮಾರ್.ಬಿ ಶಿಬಿರ ಉದ್ಘಾಟಿಸಿದರು.
ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಸುರತ್ಕಲ್ ಐ ಮಿತ್ರದ ಡಾ ರಾಮಚಂದ್ರ ಮತ್ತು ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು,ಕೆಮ್ಮನ್ ಪಳಿಕೆ ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ, ಪೆರ್ಲಾಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಸಂಯೋಜಕಿ ಅಶ್ಮಿತಾ, ಸುರೇಶ, ಗೋಪಾಲ, ರಮೇಶ, ಅಶೋಕ, ಕೇಶವ, ಜನಾರ್ದನ, ತಾರನಾಥ, ಚಂದ್ರಾವತಿ, ಸುನಂದಾ, ಮಮತಾ, ಜಗದೀಶ, ಶೀನಪ್ಪ, ಗಿರೀಶ, ವೆಂಕಪ್ಪ, ಸೇವಾಪ್ರತಿನಿಧಿ ಸುಚಿತ್ರ, ಜಲಜಾಕ್ಷಿ, ಭಾರತಿ ಉಪಸ್ಥಿತರಿದ್ದರು.