ಪುತ್ತೂರು: ಆರ್ಲಪದವು ದಾರುಲ್ ಹಿದಾಯ ಎಜ್ಯುಕೇಶನ್ ಫೌಂಡೇಶನ್ & ಚಾರಿಟೇಬಲ್ ಟ್ರಸ್ಟ್ ಹಾಗೂ ದಾರುಲ್ ಹಿದಾಯ ಮುಸ್ಲಿಂ ಯೂತ್ ಫೆಡರೇಶನ್ ಸಂಯುಕ್ತ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ಕಲಾ ಸಮ್ಮೇಳನ ಹಾಗೂ ಸೇವಾ ಸಮ್ಮಿಲನ-2024 ಕಾರ್ಯಕ್ರಮ ಮಾ.1 ರಿಂದ 3 ರ ತನಕ ಆರ್ಲಪದವು ಮರ್ಹೂಂ ಸುಲ್ತಾನ್ ಹಾಜಿ ನಗರದಲ್ಲಿ ನಡೆಯಲಿದೆ ಎಂದು ದಾರುಲ್ ಹಿದಾಯ ಎಜ್ಯುಕೇಶನ್ ಫೌಂಡೇಶನ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾ.1ರಂದು ಅಪರಾಹ್ನ ಅಂತರ್ ರಾಜ್ಯ ಮಟ್ಟದ ಕವಾಲಿ ಸ್ಪರ್ಧೆ ನಡೆಯಲಿದೆ. ರಾತ್ರಿ ವಾರ್ಷಿಕ ಸಮಾವೇಶ, ಸ್ನೇಹ ಸಮ್ಮಿಲನ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ 31 ಮಂದಿ ಸಾಧಕರಿಗೆ ರಾಜ್ಯ ಮಟ್ಟದ ‘ಸಮಾಜ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮಾ.2 ರಂದು ದೇರಳಕಟ್ಟೆ ಯೆನಪೋಯ ವಿಶ್ವ ವಿದ್ಯಾನಿಲಯದ ಸಹಯೋಗದಲ್ಲಿ ಬೆಳಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಪಾಣಾಜೆ ಅಫ್ರಾ ಮಸೀದಿ ಖತೀಬ್ ದುವಾಶೀರ್ವಚನ ನೀಡಲಿದ್ದಾರೆ. ಮದ್ಯಾಹ್ನ ಅಂತರ್ ರಾಜ್ಯ ಮಟ್ಟದ ಬುರ್ದಾ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಎಂ.ಎ. ಅಬ್ಬಾಸ್ ಸಹದಿ ಡಮ್ಮಂಗರ ದುವಾಶೀರ್ವನ ನೀಡಲಿದ್ದಾರೆ. ಸಂಜೆ ನೂರೇ ಅಜ್ಮೀರ್ ಆದ್ಯಾತ್ಮ ಮಜ್ಲೀಸ್ ನಡೆಯಲಿದ್ದು, ವಲಿಯುದ್ದಿನ್ ಫೈಝಿ ವಾಝಕ್ಕಾಡ್ ನೇತೃತ್ವ ವಹಿಸಲಿದ್ದಾರೆ. ಸಯ್ಯದ್ ಅಕ್ರಂ ಅಲೀ ತಂಙಳ್ ರಹ್‌ಮಾನಿ ಕರಾವಳಿ ದುವಾಶೀರ್ವಚನ ನೀಡಲಿದ್ದಾರೆ. ದಾರುಲ್ ಹಿದಾಯ ಗೌರವ ಅಧ್ಯಕ್ಷ ಹಾದಿ ತಂಙಳ್ ಅಲ್ ಮಶ್ಹೂರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ 25 ಉಲೇಮಾ ಶಿರೋಮಣಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.
ಮಾ.3ರಂದು ಬೆಳಗ್ಗೆ ಅಂತಾರಾಜ್ಯ ಮಟ್ಟದ ಗಾಯಕರಿಂದ ‘ಇಶಲ್ ಹಬೀಬ’ ಗಾಯನ ಸ್ಪರ್ಧಾಕೂಟ ನಡೆಯಲಿದೆ. ಆರ್ಲಪದವು ಮಸೀದಿ ಮುಅಲ್ಲಿಂ ಮಹಮ್ಮದ್ ಶರೀಫ್ ಬದರಿ ದುವಾಶೀರ್ವಚನ ನೀಡಲಿದ್ದಾರೆ. ಸಂಜೆ ಪಾಣಾಜೆ ಪಳ್ಳಿತ್ತಡ್ಕ ದರ್ಗಾ ಶರೀಫ್‌ನಿಂದ ಸಮ್ಮೇಳನ ನಗರಕ್ಕೆ ‘ಬ್ರಹತ್ ದಫ್ ರ್‍ಯಾಲಿ’ ನಡೆಯಲಿದೆ. ಸಯ್ಯದ್ ಹಾಷಿಂ ತಂಙಳ್ ಬಅಲವಿ ಬಾಖವಿ ಕೊರಿಂಗಿಲ ಅವರ ನೇತೃತ್ವದಲ್ಲಿ ದರ್ಗಾ ಝಿಯಾರತ್ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸಂಜೆ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರ ನೇತೃತ್ವದಲ್ಲಿ ‘ಸಾಮೂಹಿಕ ವಿವಾಹ’ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ 2 ಬಡ ಕುಟುಂಬದ ಜೋಡಿಗಳಿಗೆ ವಿವಾಹ ಕಾರ್ಯ ನಡೆಯಲಿದೆ. ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಸ್ಪೀಕರ್ ಯು.ಟಿ. ಖಾದರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಬ್ರಾಹಿಂ ಕತ್ತರ್ ಹಾಜಿ, ಕೆ.ಎ. ಅಲಿ, ಉಮ್ಮರ್ ಶಾಫಿ, ಬದ್ರುಲ್ ಮುನೀರ್ ಉಪಸ್ಥಿತರಿದ್ದರು.