ಬಂಟ್ವಾಳ : ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು
ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಭಾನುವಾರ ಮುಂಜಾನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.
ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ ಪ್ರಸ್ತುತ ಪಾಣೆಮಂಗಳೂರು – ಆಲಡ್ಕ ವಾಸ್ತವ್ಯವಿರುವ ಆಶ್ರಫ್ (32) ಮೃತಪಟ್ಟ ಯುವಕ.
ಆಲಡ್ಕ ನಿವಾಸಿ ತಸ್ವೀರ್ ಆಶ್ರಫ್ ಅವರ ಸ್ನೇಹಿತರಾಗಿದ್ದು, ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತನಿಗೆ ಡ್ರಾಫ್ ಕೊಡುವ ಉದ್ದೇಶದಿಂದ ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡಿಗೆ ತೆರಳಿದ್ದು ಬೆಳಿಗ್ಗೆ ಸುಮಾರು 5.30 ರ ವೇಳೆ ಆಶ್ರಫ್ ಅವರು ಕೈಕಂಬದಲ್ಲಿರುವ ತರಕಾರಿ ಅಂಗಡಿಗೆ ಇನ್ನೇನು ಸ್ನೇಹಿತ ತನ್ನೀರ್ ನ್ನು ಇಳಿಸಬೇಕು ಎನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಖಾಲಿ ಮಾಡಿ ವಾಪಾಸು ಹೋಗುವ ಲಾರಿಯ ಚಾಲಕ ಲಾರಿಯನ್ನು ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಿಂದ ಇಬ್ಬರಿಗೂ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡ ಆಶ್ರಫ್ ನನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.