ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಗಣೇಶ್‌ಭಟ್‌ರವರಿಗೆ ಬೀಳ್ಕೊಡುಗೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ 36 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಉಪಪ್ರಾಂಶುಪಾಲ ಪ್ರೊ| ಗಣೇಶ್‌ಭಟ್‌ರವರಿಗೆ ಕಾಲೇಜಿನ ಸ್ಟಾಫ್‌ಅಸೋಸಿಯೇಶನ್‌ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಅತಿ ವಂ| ಲಾರೆನ್ಸ್‌ಮಸ್ಕರೇನಸ್‌ಮಾತನಾಡಿ, ನಿವೃತ್ತಿಯು ಹೊಸ ಜೀವನದ ಬಾಗಿಲನ್ನು ತೆರೆದಿಡುತ್ತದೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂತೃಪ್ತ ಜೀವನ ನಡೆಸಲು ಸೇವಾ ನಿವೃತ್ತಿಯು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಿನ್ಸಿಪಾಲ್ ವಂ| ಡಾ| ಆಂಟೊನಿ ಪ್ರಕಾಶ್‌ಮೊಂತೆರೋರ ಮಾತನಾಡಿ, ಗಣಿತವನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಬೋಧಿಸುವುದು ಸವಾಲಿನ ಕಾರ್ಯ. ಈ ಕೆಲಸವನ್ನು ಪ್ರೊ| ಗಣೇಶ್‌ಭಟ್‌ರವರು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿರುತ್ತಾರೆ. ಮಾತ್ರವಲ್ಲದೆ ತಮ್ಮ ಸೇವಾಸಂದರ್ಭದಲ್ಲಿ ಕಾಲೇಜು ನೀಡಿದ ಇತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿರುತ್ತಾರೆ ಎಂದರು.





























 
 

ಕಾಲೇಜಿನ  ಕ್ಯಾಂಪಸ್‌ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ  ಪ್ರೊ| ಗಣೇಶ್‌ಭಟ್‌ರವರ ನಿವೃತ್ತ ಜೀವನ ಆರೋಗ್ಯ  ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಪ್ರೊ| ಗಣೇಶ್‌ಭಟ್‌ ಮಾತನಾಡಿ, ತಾವು ಕಲಿತ ವಿದ್ಯಾಸಂಸ್ಥೆಗಳಲ್ಲಿ ದೊರಕಿದ ಗುಣಮಟ್ಟದ ಶಿಕ್ಷಣವನ್ನು ಹಾಗೂ ತಮ್ಮ ವೃತ್ತಿಜೀವನದ ಅವಿಸ್ಮರಣೀಯ ಘಟನೆಗಳನ್ನು ವಿವರಿಸಿ ತಮ್ಮ ವೃತ್ತಿ ಜೀವನವು ಸುಗಮವಾಗಿ ಸಾಗುವಲ್ಲಿ ನೆರವಾದ ಪ್ರತಿಯೋರ್ವರಿಗೂ ವಂದನೆ ಸಲ್ಲಿಸಿದರು.

ಪ್ರೊ| ಗಣೇಶ್‌ಭಟ್‌ರವರಿಗೆ ಕಾಲೇಜಿನ ಸ್ಟಾಫ್‌ಅಸೋಸಿಯೇಶನ್‌ನ ವತಿಯಿಂದ ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಫಲಕ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಗೀತಾ ಪೂರ್ಣಿಮಾ ಮತ್ತು ಬಳಗ ಪ್ರಾರ್ಥಿಸಿದರು. ಸ್ಟಾಫ್‌ ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಡಿಂಪಲ್‌ಜೆನಿಫರ್‌ಫೆರ್ನಾಂಡಿಸ್‌ಸ್ವಾಗತಿಸಿದರು. ಕಾಲೇಜಿನ ಉಪಪ್ರಿನ್ಸಿಪಾಲ್ ಡಾ| ಪಿ.ಎಸ್‌. ಕೃಷ್ಣ ಕುಮಾರ್‌ ಸನ್ಮಾನ ಭಾಷಣ ಮಾಡಿದರು. ಪ್ರಾಧ್ಯಾಪಕ ಡಾ| ಎಡ್ವಿನ್‌ಡಿಸೋಜ ಸನ್ಮಾನ ಪತ್ರ ವಾಚಿಸಿದರು.  ಸ್ಟಾಫ್‌ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ| ಬಸ್ತ್ಯಂ ಪಯಾಸ್‌ವಂದಿಸಿದರು. ಉಪನ್ಯಾಸಕಿ ಜಸ್ಲಿನ್‌ಡಿ ಕುನ್ಹ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪಪ್ರಿನ್ಸಿಪಾಲ್ ಡಾ| ವಿಜಯ ಕುಮಾರ್‌ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top