ಆರ್.ಡಿ.ಸಿ ಯಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು: ರಾಜ್ಯಮಟ್ಟದಲ್ಲಿ ಕಾಲೇಜಿನ ಹೆಸರನ್ನು ಗುರುತಿಸುವಂತೆ ಮಾಡಿದ ತೃತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ತೇಜಸ್ವಿನಿ ಒಬ್ಬಳು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಅದಕ್ಕೆ ನಮ್ಮ ಅಧ್ಯಾಪಕರು ಉತ್ತಮ ಸಹಕಾರ ನೀಡುತ್ತಾರೆ. ಜೊತೆಗೆ ಹೆತ್ತವರ ಸಹಕಾರವು ಇರುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇನ್ನೂ ಸಾಧನೆ ಮಾಡಬೇಕು. ಆ ಮೂಲಕ ನಮ್ಮ ಕಾಲೇಜಿಗೆ ಕೀರ್ತಿಯನ್ನು ತಂದುಕೊಡಬೇಕು ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಗಣಪತಿ ಭಟ್ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಎನ್.ಸಿ.ಸಿ. ಘಟಕದ ಸಹಯೋಗದಲ್ಲಿ ಆಯೋಜಿಸಿದ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ ಕಾಲೇಜಿನ ಎನ್.ಸಿ.ಸಿ. ಘಟಕದ ಸೀನಿಯರ್ ಅಂಡರ್ ಆಫೀಸರ್ ತೇಜಸ್ವಿನಿ ವಿ. ಶೆಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.



































 
 

ಸನ್ಮಾನ ಸ್ವೀಕರಿಸಿ ಮಾತನಾಡಿದ ತೇಜಸ್ವಿನಿ ವಿ. ಶೆಟ್ಟಿ, ಎನ್.ಸಿ.ಸಿ ಕೆಡೆಟ್ ಗಳಿಗೆ ಆರ್. ಡಿ. ಸಿ. ಒಂದು ಕನಸಾಗಿರುತ್ತದೆ. ಆರ್. ಡಿ. ಸಿ. ಯಲ್ಲಿ ಭಾಗವಹಿಸಲು ಹಲವು ಹಂತಗಳನ್ನು ದಾಟಿ ಮುಂದೆ ಹೋಗಬೇಕು. ಇದರಲ್ಲಿ ಭಾಗವಹಿಸಿದ್ದು ಒಂದು ಮರೆಯಲಾಗದ ಕ್ಷಣ. ನಾನು ಆರ್. ಡಿ. ಸಿ. ಯಲ್ಲಿ ಭಾಗವಹಿಸಿ ಯಶಸ್ಸು ಕಾಣಲು ನನಗೆ ನಮ್ಮ ಕಾಲೇಜಿನ ಎನ್.ಸಿ. ಸಿ ಅಧಿಕಾರಿ ಭಾಮಿ. ಲೆ. ಅತುಲ್ ಶೆಣೈ ಹಾಗು ಉಪನ್ಯಾಸಕರು ಸಹಕಾರ ನೀಡಿದ್ದಾರೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ. ಹೆಚ್. ಜಿ ಶ್ರೀಧರ್, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವ ಪ್ರಸಾದ್ ಕೆ. ಎಸ್., ಕಾಲೇಜಿನ ವಿಶೇಷ ಅಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ಎನ್.ಸಿ.ಸಿ ಅಧಿಕಾರಿ ಅತುಲ್ ಶೆಣೈ, ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ, ಕಲಾವಿಭಾಗದ ಡೀನ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸಿ ದುರ್ಗಾರತ್ನ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಸೂರ್ಯನಾರಾಯಣ ಪಿ.ಎಸ್. ಸುಚಿತ್ರ, ಹೇಮಾ ಸುಭಾಷಿಣಿ, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ತೇಜಸ್ ಜಿ.ವಿ. ಮತ್ತು ಪೋಷಕರಾದ ವಿವೇಕಾನಂದ ಶೆಟ್ಟಿ ಮತ್ತು ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಚೈತನ್ಯ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ ಸೀನಿಯರ್ ಅಂಡರ್ ಆಫೀಸರ್ ತೇಜಸ್ವಿನಿ ವಿ ಶೆಟ್ಟಿ ಇವರನ್ನು ಪುತ್ತೂರಿನಿಂದ ಕಾಲೇಜಿನ ಆವರಣಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಎನ್. ಸಿ. ಸಿ ಪಥಸಂಚಲನ, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳ ಬ್ಯಾಂಡ್ ಪಾರ್ಟಿ ಮೂಲಕ ಸ್ವಾಗತಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top