ಆಕರ್ಷಣ್ ಇಂಡಸ್ಟ್ರೀಸ್ ನಿಂದ 5 ತಾಲೂಕಿನ ಗ್ರಾಹಕರಿಗೆ ಭರ್ಜರಿ ಕೊಡುಗೆ | 5 ಚಿನ್ನ, 25 ಬೆಳ್ಳಿ ನಾಣ್ಯ ಗೆಲ್ಲುವ ಸುವರ್ಣಾವಕಾಶ

ಪುತ್ತೂರು: ವಿವಿಧ ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಕ್ಷೇತ್ರದಲ್ಲಿ, ವಿಶೇಷವಾಗಿ ಕೃಷಿಕರಿಗೆ ಅತೀ ಅಗತ್ಯವಿರುವ ಉತ್ಪನ್ನಗಳ ತಯಾರಿಕೆಯಲ್ಲಿ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ, ತಂತ್ರಜ್ಞಾನ ಹಾಗೂ ಸೇವೆಯ ಮೂಲಕ ತನ್ನದೇ ಆದ ಛಾಪನ್ನು ಒತ್ತಿ ಯಶಸ್ಸಿನ ಹೆಜ್ಜೆಯನ್ನು ಇಡುತ್ತಿದೆ.

ಕೃಷಿಕರ ಅನುಕೂಲಕ್ಕಾಗಿ ವಿವಿಧ ಕೃಷಿ ಉಪಯೋಗಿ ಉತ್ಪನ್ನಗಳಾದ ಡ್ರ್ಯಾಗನ್ ಫ್ರುಟ್ ಸ್ಟ್ಯಾಂಡ್, ಬೇಲಿ ಕಂಬ, ವಿಯೆಟ್ನಾಮ್ ಮಾಡೆಲ್ ಪೆಪ್ಪರ್ ಫಾರ್ಮ್ ಕಾಂಕ್ರೀಟ್ ಪೋಲ್ ಹಾಗೂ ವಯ್ ಪೋಲ್ ಗಳನ್ನು ಮಾರಾಟ ಮಾಡುತ್ತಿದೆ.

ಇದೀಗ ಸಂಸ್ಥೆಯ ಇಪ್ಪತ್ತೆಂಟನೇ ವರ್ಷಾಚರಣೆಯ ಪ್ರಯುಕ್ತ ಸಹಕಾರೀ ಸಂಘದ ಮೂಲಕ ಕೃಷಿಕರಿಗೆ ಚಿನ್ನದ ನಾಣ್ಯ ಹಾಗೂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅದೃಷ್ಟದ ಅವಕಾಶವನ್ನು ಕಲ್ಪಿಸಲಾಗಿದೆ. ಮಾತ್ರವಲ್ಲ ಕೆಲವೊಂದು ಉತ್ಪನ್ನಗಳನ್ನು ನಿಗದಿಪಡಿಸಿದ ಅವಧಿಗೆ ನಿಗದಿತ ದೂರಗಳಿಗೆ ಕೃಷಿಕರ ಮನೆಬಾಗಿಲಿಗೆ ಉಚಿತವಾಗಿ ಸಾಗಾಟ ಮಾಡಿಕೊಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.





























 
 

ಅದೃಷ್ಟದ ಕೂಪನ್ ಗಳನ್ನು ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ಸಹಕಾರಿ ಸಂಘಗಳಿಗೆ ತಲುಪಿಸಿದ್ದಾರೆ. ಆದ್ದರಿಂದ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ :  6364143375 ಸಂಪರ್ಕಿಸಿ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top