ಕ್ರೀಡಾಕೂಟದಲ್ಲಿ ಯುವಕರು ಮುತುವರ್ಜಿಯಿಂದ ಭಾಗವಹಿಸಿ ಸಮುದಾಯದ ಏಳಿಗೆಗೆ ಕೈಜೋಡಿಸಬೇಕು | ಮಂಗಳೂರು ಯುವ ಘಟಕ-ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಒಕ್ಕಲಿಗರ ಪ್ರೀಮಿಯರ್ ಲೀಗ್-2024 ಕ್ರಿಕಟ್ ಪಂದ್ಯಾಟದಲ್ಲಿ ಅಕ್ಷಯ ಕುರುಂಜಿ

ಮಂಗಳೂರು: ಮಂಗಳೂರು ಯುವ ಘಟಕ-ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಒಕ್ಕಲಿಗರ ಪ್ರೀಮಿಯಾರ್ ಲೀಗ್-2024 ಮಂಗಳೂರು (ವಿಪಿಎಲ್) ಅಂತರ್ ಜಿಲ್ಲಾ ಮಟ್ಟದ ಹೊನಲು

ಬೆಳಕಿನ ಕ್ರಿಕೆಟ್ ಪಂದ್ಯಾಟ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಪ್ರಥಮ ಬಾರಿಗೆ ಅದ್ಧೂರಿಯಾಗಿ ನಡೆಯಿತು.

ಸುಳ್ಯ ಅಕಾಡೆಮಿ ಆಫ್‍ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕುರುಂಜಿ ಉದ್ಘಾಟನಾ ಸಮಾರಂಭಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಯುವ ಸಮುದಾಯದ ಸಂಘಟನೆಗಾಗಿ ಹಮ್ಮಿಕೊಂಡ ಇಂತಹ ಪಂದ್ಯಾಟಗಳಲ್ಲಿ ಯುವಕರು ಮುತುವರ್ಜಿಯಿಂದ ಭಾಗವಹಿಸಿ ಸಮುದಾಯದ ಏಳಿಗೆಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕೈಜೋಡಿಸಬೇಕು. ಯಾವುದೇ ಕಾರ್ಯಕ್ರಮ ಆಯೋಜನೆ ಬಹಳ ಕ್ಲಿಷ್ಟಕರ. ಸಮುದಾಯದ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಭಾಗವಹಿಸುವುದರ ಮೂಲಕ ಗೌರವಿಸುವಂತಾಗಬೇಕು ಎಂದರು.































 
 

ಸಮಾರಂಭದ ಅಧ್ಯಕ್ಷತೆಯನ್ನು ಕಿರಣ್ ಬುಡ್ಲೆಗುತ್ತು ವಹಿಸಿದ್ದರು. ಗುರುದೇವ್ ಯು. ಬಿ, ರವಿ ಮುಂಗ್ಲಿಮನೆ, ಚಿದಾನಂದ ಬೈಲಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಒಕ್ಕಲಿಗ ಗೌಡ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರಜ್ಞಾ ಕಾಪಿನಡ್ಕ ಪ್ರಾರ್ಥಿಸಿದರು. ಕಿರಣ್ ಹೊಸಳಿಕೆ ವಂದಿಸಿದರು. ಮೋಹನ್ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾಟದಲ್ಲಿ ಒಟ್ಟು 32 ತಂಡಗಳು ಭಾಗವಹಿಸಿದ್ದು ಲೀಗ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಿತು. ಮರುದಿನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರನ್ನು ಸ್ಮರಿಸಿ, ಯುವಕರನ್ನು ಒಟ್ಟುಗೂಡಿಸುವ ಕಾರ್ಯಕ್ಕೆ ಕ್ರೀಡಾಕೂಟದ ಆಯೋಜನೆ ಅಗತ್ಯವಿದೆ. ಸಮುದಾಯದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಪಿ. ಸಿ. ಜಯರಾಂ, ಕೆ. ಎಂ ನಾಗೇಶ್ ಕುಮಾರ್, ಡಾ| ಶಿವಕುಮಾರ್ ಹೊಸೋಳಿಕೆ, ವೆಂಕಟ್ ವಳಲಂಬೆ, ಎ. ವಿ. ತೀರ್ಥರಾಮ, ಗುರುದೇವ್ ಯ. ಬಿ. ಮಾತನಾಡಿದರು. ವೇದಿಕೆಯಲ್ಲಿ ಒಕ್ಕಲಿಗ ಸಮಾಜದ ಗಣ್ಯರು, ಉದ್ಯಮಿಗಳು ಉಪಸ್ಥಿತರಿದ್ದರು. ಪ್ರಜ್ಞಾ ಕಾಪಿನಡ್ಕ ಪ್ರಾರ್ಥಿಸಿದರು. ಯುವ ಘಟಕದ ಕಾರ್ಯದರ್ಶಿ ಕಿರಣ ಹೊಸಳಿಕೆ ವಂದಿಸಿದರು. ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.

ಫೈನಲ್ ಪಂದ್ಯಾಟದಲ್ಲಿ ಮಂಗಳೂರು ಯುನೈಟೆಡ್ ಮತ್ತು ಪಟ್ರಮೆ ಬ್ರದರ್ರ್ಸ್ ಬಿ. ತಂಡಗಳ ಮಧ್ಯೆ ಸೆಣೆಸಾಟ ನಡೆದು ಮಂಗಳೂರು ಯುನೈಟೆಡ್ ತಂಡ ವಿಜಯಿಯಾಯಿತು. ಪ್ರಥಮ ಮಂಗಳೂರು ಯುನೈಟೆಡ್ ತಂಡ, ದ್ವಿತೀಯ ಪಟ್ರಮೆ ಬ್ರದರ್ರ್ಸ್ ಬಿ ತಂಡ ಹಾಗೂ ತೃತೀಯ ಬಹುಮಾನವನ್ನು ಸೋಮವಾರಪೇಟೆ ಒಕ್ಕಲಿಗ ಯುವ ವೇದಿಕೆ ಹಾಗೂ ಟೀಮ್ ಗೌಡಾಸ್ ಗೋಣಿಕೊಪ್ಪ ಚತುರ್ಥ ಬಹುಮಾನಗಳನ್ನು ಪಡೆದುಕೊಂಡರು.  ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಮಂಗಳೂರು ಯುನೈಟೆಡ್ ತಂಡದ ಆಟಗಾರ ಲೋಕೇಶ್ ಪುತ್ತೂರು ಪಡೆದರು. ಉತ್ತಮ ಎಸೆತಗಾರ ಮತ್ತು ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಪಟ್ರಮೆ ಬ್ರದರ್ಸ್ ಬಿ ತಂಡದ ಆಟಗಾರ ರೋಹಿತ್ ಸುಬ್ರಮಣ್ಯ ಪಡೆದರು. ಉತ್ತಮ ಫೀಲ್ಡರ್ ಪ್ರಶಸ್ತಿಯನ್ನು ಒಕ್ಕಲಿಗ ಯುವ ವೇದಿಕೆ ಸೋಮವಾರಪೇಟೆ ತಂಡದ ಆಟಗಾರ ವಿಕ್ರಮ ಸಾಗರ್ ಪಡೆದುಕೊಂಡರು.

ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ಮಂಗಳೂರು ಯುವ ಘಟಕ ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಅಧ್ಯಕ್ಷರು, ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ.ಬಿ., ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಉಪಾಧ್ಯಕ್ಷ ಡಾ| ಪುರುಷೋತ್ತಮ, ಕೋಶಾಧಿಕಾರಿ,  ಮಂಗಳೂರು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿಯ ಶಿವರಾಮ ನಿನ್ನಿಕಲ್ಲು, ಮಂಗಳೂರು ಯುವ ಘಟಕ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಕಾರ್ಯದರ್ಶಿ ಕಿರಣ್ ಹೊಸಳಿಕೆ, ಮಂಗಳೂರು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ  ಸ್ಮಾರಕ ಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಪಂದ್ಯಾಟ ಸಂಚಾಲಕ  ಸುನಿಲ್ ಕೆರ್ನಡ್ಕ ಹಾಗೂ ಯುವ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top