ಬಾಲಿವುಡ್ ನಟಿ ಐಶ್ವರ್ಯಾ ರೈಯವರನ್ನು ಅವಮಾನಿಸಿದ ರಾಹುಲ್ ಗಾಂಧಿ | ಕಿಡಿ ಕಾರಿದ ಬಿಜೆಪಿ

ಹೊಸದಿಲ್ಲಿ: ಬಾಲಿವುಡ್ ಖ್ಯಾತ ನಟಿ ಕರ್ನಾಟಕದವರಾಗಿರುವ ಐಶ್ವರ್ಯಾ ರೈಯವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಂದಿಸುವ ಮೂಲಕ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಈ ಕುರಿತು ಬಿಜೆಪಿ ರಾಹುಲ್ ವಿರುದ್ಧ ಕಿಡಿ ಕಾರಿದೆ.

ಈ ವಿಚಾರದಲ್ಲಿ ಬಿಜೆಪಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೂ ಟೀಕಾ ಪ್ರಹಾರ ಮಾಡಿದೆ. ಕನ್ನಡತಿಯೊಬ್ಬರಿಗೆ ನಿಮ್ಮ ಬಾಸ್ ಅವಮಾನ ಮಾಡುತ್ತಿರುವಾಗಲೂ ನಿಮ್ಮ ತಥಾಕಥಿತ ಕನ್ನಡದ ಹೆಮ್ಮೆಯ ಪ್ರಜ್ಞೆ ಜಾಗೃತವಾಗುತ್ತಿಲ್ಲವೇ ಎಂದು ಸಿದ್ಧರಾಮಯ್ಯನವರನ್ನು ಬಿಜೆಪಿ ಪ್ರಶ್ನಿಸಿದೆ. ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಭಾಗವಹಿಸಿದ್ದಾರೆ ಎಂದು ಹೇಳಿ ಅವರನ್ನು ನಾಚ್ ವಾಲಿ ಎಂದು ಕೀಳು ಪದಗಳಿಂದ ರಾಹುಲ್ ಗಾಂಧಿ ಕರೆದಿದ್ದಾರೆ. ಇದಕ್ಕೂ ಮೊದಲು ಅವರು ಪ್ರಾಣ ಪ್ರತಿಷ್ಠೆಯಲ್ಲಿ ಭಾಗವಹಿಸಿದ ಅಮಿತಾಭ್ ಬಚ್ಚನ್ ಪರಿವಾರವನ್ನು ಟೀಕಿಸಿದ್ದರು. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಭಾಗವಹಿಸದಿದ್ದರೂ ಅವರ ಹೆಸರನ್ನು ಎಳೆದು ತಂದಿರುವುದಲ್ಲದೆ ಅವರನ್ನು ಕೀಳು ಶಬ್ದಗಳಲ್ಲಿ ಅವಮಾನಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಭಾರತೀಯರಿಂದ ನಿರಂತರವಾಗಿ ತಿರಸ್ಕೃತರಾಗಿ ಹತಾಶ ಸ್ಥಿತಿಗೆ ತಲುಪಿಸುವ ರಾಹುಲ್ ಗಾಂಧಿ ಭಾರತೀಯ ಹೆಮ್ಮೆಯ ಪುತ್ರಿ ಐಶ್ವರ್ಯಾ ರೈಯವರನ್ನು ಅಪಮಾನಿಸಿದ್ದಾರೆ. ಶೂನ್ಯ ಸಾಧನೆಯ ನಾಲ್ಕನೇ ಪೀಳಿಗೆಯ ರಾಜಕುಮಾರ ಈಗ ಭಾರತದ ಹೆಮ್ಮೆಯ ನಟಿಯನ್ನು ತೆಗಳುತ್ತಿದ್ದಾರೆ. ರಾಹುಲ್ ಗಾಂಧಿಯ ಇಡೀ ಕುಟುಂಬಕ್ಕಿಂತ ಹೆಚ್ಚಿನ ಹೆಮ್ಮೆಯನ್ನು ಐಶರ್ಯಾ ರೈ ದೇಶಕ್ಕೆ ತಂದು ಕೊಟ್ಟಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.































 
 

ಸಿದ್ಧರಾಮಯ್ಯನವರೇ ನಿಮ್ಮ ಬಾಸ್ ಕನ್ನಡಿಗರನ್ನು ಈ ರೀತಿ ಅವಮಾನಿಸುತ್ತಿದ್ದರೂ ನೀವು ನಿಮ್ಮ ಕುರ್ಚಿಯನ್ನು ಉಳಿಸುವ ಸಲುವಾಗಿ ಮೌನವಾಗಿ ಇರುತ್ತೀರಾ ಅಥವಾ ರಾಹುಲ್ ಗಾಂಧಿ ವಿರುದ್ಧ ಮಾತನಾಡುವ ದಿಟ್ಟತನ ತೋರಿಸುತ್ತೀರಾ ಎಂದು ಬಿಜೆಪಿ ಪ್ರಶ್ನಿಸಿದೆ.

1 thought on “ಬಾಲಿವುಡ್ ನಟಿ ಐಶ್ವರ್ಯಾ ರೈಯವರನ್ನು ಅವಮಾನಿಸಿದ ರಾಹುಲ್ ಗಾಂಧಿ | ಕಿಡಿ ಕಾರಿದ ಬಿಜೆಪಿ”

  1. ವಸಂತ್ ಶಂಕರ್

    ಅವರ ಅತ್ತೆ ಜಯಾ ಬಚ್ಚನ್ ಕಾಂಗ್ರೆಸ್ ದೋಸ್ತಿ ಸಪ ದ mp. ಅವರ ಬಾಯಿಂದ ಮುತ್ತು ಉದುರುತ್ತಿಲ್ಲವೇಕೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top