ವೆಬ್ಸೈಟ್, ಸಾಮಾಜಿಕ ಜಾಲತಾಣ ಜೀವನದ ಅವಿಭಾಜ್ಯ ಅಂಗ : ಡಾ.ಕೆ.ಎಂ.ಕೃಷ್ಣ ಭಟ್ | ಮರು ವಿನ್ಯಾಸಗೊಂಡ ವೆಬ್ಸೈಟ್, ಸಾಮಾಜಿಕ ಜಾಲತಾಣಗಳ ಅನಾವರಣ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮರು ವಿನ್ಯಾಸಗೊಂಡ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಅನಾವರಣ ಕಾರ್ಯಕ್ರಮ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾಸಂಸ್ಥೆ ಅಭಿವೃದ್ಧಿ ಹೊಂದಲು ಮತ್ತು ಕಾಲೇಜಿನ ಎಲ್ಲಾ ಮಾಹಿತಿಗಳು ಹೊರ ಜಗತ್ತಿಗೆ ತಿಳಿಯಪಡಿಸಲು ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳು ಅತ್ಯಂತ ಸಹಾಯಕಾರಿ. ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ. ಸೋಶಿಯಲ್ ಮೀಡಿಯಾ ಎಂಬುದು ಒಬ್ಬರಿಗೊಬ್ಬರು ಸಂಪರ್ಕದಿಂದಿರಲು, ಮಾಹಿತಿಯನ್ನು ಹಂಚಿಕೊಳ್ಳಲು ಹೀಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ. ಆದ್ದರಿಂದ ಇದು ಒಂದು ಅವಿಭಾಜ್ಯ ಅಂಗವಾಗಿದೆ. ಈ ಮೂಲಕ ಹದಿಹರೆಯದವರಿಂದ ಹಿಡಿದು ವೃದ್ಧರವರೆಗೂ ಅವರ ಅಗತ್ಯಕ್ಕೆ ತಕ್ಕಂತೆ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡುತ್ತಿದ್ದಾರೆ. ಕೆಲವೊಂದು ಬಳಕೆದಾರರಿಗೆ ವಿಷಯಗಳನ್ನು ಹಂಚಿಕೊಳ್ಳಲು, ಸಂಪರ್ಕವನ್ನು ಬೆಳೆಸಲು ಕೂಡ ಇದು  ಸಹಕಾರಿಯಾಗುತ್ತವೆ ಎಂದರು.

ಮುಖ್ಯ ಅತಿಥಿಯಾಗಿ ಪುತ್ತೂರಿನ ವೆಬ್ ಪೀಪಲ್ ಸಂಸ್ಥೆಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಶ್ರೀನಿವಾಸ್ ಮಾತನಾಡಿ, ಸಾಮಾಜಿಕ ಜಾಲತಾಣ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಅಂಗವಾಗಿದೆ. ಒಬ್ಬರೊಬ್ಬರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು, ಸಮೂಹ ಸಂವಹನ ನಡೆಸಲು ಮತ್ತು ಸಾಮಾಜಿಕ ಬದಲಾವಣೆಗೆ ವೆಬ್ಸೈಟ್ ಪ್ರಮುಖ ಸಾಧನವು ಹೌದು. ಕಾಲೇಜಿನಲ್ಲಿ ನಡೆಯುವ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ವೆಬ್ಸೈಟ್  ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ  ಅನೇಕ ಸುಧಾರಿತ ವಿಚಾರಗಳು, ಹೊಸ ಹೊಸ ಮತ್ತು ಆಸಕ್ತಿದಾಯಕ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲು ಇದು ಅತ್ಯಂತ ಸಹಾಯಕಾರಿ ಎಂದರು.































 
 

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳು ಸಂವಹನದ ಅತಿದೊಡ್ಡ ಸಾಧನಗಳಲ್ಲಿ ಒಂದಾಗಿದೆ ಮತ್ತು ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಸಾಮಾಜಿಕ ಮಾಧ್ಯಮವು ಆಲೋಚನೆಗಳು, ವಿಷಯ, ಮಾಹಿತಿ, ಸುದ್ದಿ ಇತ್ಯಾದಿಗಳನ್ನು ವೇಗವಾಗಿ ಹಂಚಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ ಎಂದರು.

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಗೋಪಾಲಕೃಷ್ಣ ಭಟ್, ಸದಸ್ಯ ಕೆ. ಎನ್ ಸುಬ್ರಹ್ಮಣ್ಯ ಭಟ್, ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಉಪನ್ಯಾಸಕ ಶ್ಯಾಮ್ ಪ್ರಸಾದ್  ಕಾರ್ಯಕ್ರಮವನ್ನು ನಿರೂಪಿಸಿದರು.  ಉಪಪ್ರಾಂಶುಪಾಲ ದೇವಿಚರಣ್ ರೈ ಸ್ವಾಗತಿಸಿ, ಶ್ರೀವತ್ಸ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top