ಫೆ.22: ಸುಲ್ತಾನ್ ಡೈಮಂಡ್ & ಗೋಲ್ಡ್ ಪುತ್ತೂರು ಶೋರೂಂ ಶುಭಾರಂಭ | ಉದ್ಘಾಟನೆ ಮಾಡಲಿದ್ದಾರೆ ಖ್ಯಾತ ಚಿತ್ರನಟಿ ಪ್ರಿಯಾಮಣಿ

ಪುತ್ತೂರು: ವಿಶ್ವಾಸಾರ್ಹ ಆಭರಣ ಬ್ರಾಂಡ್ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ನ 10ನೇ ಶಾಖೆ ಪುತ್ತೂರಿನ ಏಳ್ಮುಡಿಯಲ್ಲಿರುವ ರಾಮ್‍ ರಾಜ್ ಕಾಟನ್ ಎದುರುಗಡೆ ನೂತನವಾಗಿ ನಿರ್ಮಾಣಗೊಂಡಿರುವ ತಾಜ್ ಟವರ್ಸ್‍ ನಲ್ಲಿ  ಫೆ.22 ಗುರುವಾರ ಶುಭಾರಂಭಗೊಳ್ಳಲಿದೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಜನಪ್ರಿಯ ಚಿತ್ರನಟಿ ಪ್ರಿಯಾಮಣಿ ಅವರಿಂದ ಮಳಿಗೆ ಉದ್ಘಾಟನೆಗೊಳ್ಳಲಿದೆ.

ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ವೈವಿಧ್ಯಮಯ ವಜ್ರದ ಸಂಗ್ರಹವನ್ನು ಅನಾವರಣ ಗೊಳಿಸಲಿದ್ದಾರೆ. ಸ್ಥಳೀಯ ನಗರಸಭಾ ಸದಸ್ಯೆ ವಿದ್ಯಾ ಆರ್‍. ಗೌರಿ ಜೆಮ್ ಸ್ಟೋನ್ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಪುತ್ತೂರಿನ SDPI ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ “ಆಂಟಿಕ್” ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಕೆಪಿ ಅಹಮದ್ ಹಾಜಿ ಆಕರ್ಷಣ್, ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಚಿನ್ನಾಭರಣದ ಸಂಗ್ರಹವನ್ನು ಅನಾವರಣ ಗೊಳಿಸಲಿದ್ದಾರೆ. ಸುದಾನ ವಸತಿ ಶಾಲೆಯ ಸಂಚಾಲಕ ರೆ. ವಿಜಯ್ ಹಾರ್ವಿನ್  ಮಕ್ಕಳ ಚಿನ್ನಾಭರಣ ಮತ್ತು ಬೆಳ್ಳಿಯ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಲಯನ್ಸ್ 317D  ಅಧ್ಯಕ್ಷೆ  ಡಾ.ರಂಜಿತಾ ಶೆಟ್ಟಿ CAIA – ಲೈಫ್ ಸ್ಟೈಲ್ ಜ್ಯುವೆಲ್ಲರಿಯನ್ನು ಅನಾವರಣಗೊಳಿಸಲಿದ್ದಾರೆ.































 
 

ಕಳೆದ ಮೂರು ದಶಕಗಳಿಂದ ಸುಲ್ತಾನ್ ಡೈಮಂಡ್ & ಗೋಲ್ಡ್ – ನಂಬಿಕೆ, ಶುದ್ಧತೆ, ಡಿಸೈನ್, ವೈವಿಧ್ಯತೆ, ಕನಿಷ್ಠ ತಯಾರಿಕಾ ವೆಚ್ಚ, ಮಾರಾಟ ನಂತರದ ಗ್ರಾಹಕ ಸ್ನೇಹಿ ಸೇವೆ, ಉಚಿತ ಜ್ಯುವೆಲ್ಲರಿ ನಿರ್ವಹಣಾ ವ್ಯವಸ್ಥೆ ಮುಂತಾದವುಗಳಿಂದಾಗಿ ಜನಮನ್ನಣೆ ಪಡೆದಿದೆ. ಸುಲ್ತಾನ್ ನಲ್ಲಿ ನಿವ್ವಳ ತೂಕಕ್ಕೆ ಚಿನ್ನದ ಬೆಲೆ ಮತ್ತು ಆಭರಣಗಳಲ್ಲಿರುವ ಕಲ್ಲುಗಳು ಅಥವಾ ಇನ್ನಿತರ ಪೂರಕ ಬೀಟ್ಸ್ – ಮಣಿಗಳನ್ನು ಪ್ರತ್ಯೇಕವಾಗಿ ಬೆಲೆ ಸೂಚ್ಯಂಕದಿಂದ ಮಾರಾಟ ಮಾಡಲಾಗುತ್ತದೆ. IGI ಪ್ರಮಾಣೀಕೃತ ವಜ್ರದ ಆಭರಣಗಳನ್ನು ಮತ್ತು ಪ್ಲಾಟಿನಮ್ ಗಿಲ್ಡ್ ಇಂಟರ್ನ್ಯಾಷನಲ್ (PGI) ಪ್ರಮಾಣಿಕೃತ ಪ್ಲಾಟಿನಮ್ ಆಭರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಹಾಗೆಯೇ 100% ಶುದ್ಧ BIS ಹಾಲ್ ಮಾರ್ಕ್ HUID 916 ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಪುತ್ತೂರು ಮಳಿಗೆ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತದೆ. ಪ್ರತಿದಿನ ಇಬ್ಬರು ಗ್ರಾಹಕರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ, ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50% ಕಡಿತ,  ಡೈಮಂಡ್ ಪ್ರತಿ ಕ್ಯಾರೆಟ್ ಮೇಲೆ ರೂ. 8000/- ರಿಯಾಯಿತಿ, ಬೆಳ್ಳಿ ಆಭರಣಗಳ ತಯಾರಿಕಾ ವೆಚ್ಚದ ಮೇಲೆ 25% ಕಡಿತ, ನಿಮ್ಮ ಹಳೆಯ ಚಿನ್ನದ ವಿನಿಮಿಯದಲ್ಲಿ ಪ್ರತೀ ಗ್ರಾಂಗೆ ರೂ 50/- ಹೆಚ್ಚುವರಿಯಾಗಿ ಪಡೆಯಿರಿ. ಉದ್ಘಾಟನೆ ಪ್ರಯುಕ್ತ ಈ ಕೊಡುಗೆಗಳು ಮಾ.10 ರ ವರೆಗೆ ಇರಲಿದೆ.

ಪುತ್ತೂರು ಮಳಿಗೆ ಸುಮಾರು 10,000 sq/ft ವಿಶಾಲವಾಗಿದ್ದು , ಇಲ್ಲಿ ಸುಲ್ತಾನ್ ನ ಬ್ರಾಂಡ್ ಗಳಾದ ‘ಪ್ಯೂರ್ ವೇರ್ ಡೈಮಂಡ್ ಕಲೆಕ್ಷನ್’, ‘ಅಮೋಕ ಪ್ಲಾಟಿನಂ ಕಲೆಕ್ಷನ್ಸ್’,  ‘ಆಕರ್ಷ” ಅನ್ ಕಟ್ ಡೈಮಂಡ್’, ‘ಅಮೂಲ್ಯ’ ಜೆಮ್ ಸ್ಟೋನ್ ಕಲೆಕ್ಷನ್ಸ್’, ‘ತಾರಕ’ ಮಕ್ಕಳ ಆಭರಣಗಳು’, ‘CAIA’ ಲೈಟ್ ವೈಟ್  ಆಭರಣಗಳು’, ಮತ್ತು ನಿತ್ಯೋಪಯೋಗಿ ಆಭರಣಗಳು ಇಲ್ಲಿ ಲಭ್ಯವಿದೆ.

ಸಮಕಾಲೀನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳು, ಸರಿಸಾಟಿಯಿಲ್ಲದ ಪರಿಶುದ್ಧತೆ ಮತ್ತು ಸೇವೆಗಳ ಉತ್ತಮ ಮಿಶ್ರಣದೊಂದಿಗೆ, ಸುಲ್ತಾನ್ ಪುತ್ತೂರಿನ ಆಭರಣ ಪ್ರಿಯರ ಮನಸ್ಸನ್ನು ಅಸ್ವಾದಿಸಲು ಸಿದ್ಧವಾಗಿದೆ.

ಮಾತನಾಡುತ್ತಾ “ನಾವು ಸುಲ್ತಾನ್ ಜ್ಯುವೆಲ್ಲರಿಯ ವಿಶೇಷತೆಗಳನ್ನು ಪುತ್ತೂರು ಜನತೆಗೆ  ಪರಿಚಯಿಸಲಿದ್ದು, ನಮ್ಮ ಶೋರೂಮ್ಗೆ ಭೇಟಿ ಮಾಡಿ ಸುಲ್ತಾನ್ ತನ್ನ ಗ್ರಾಹಕರಿಗೆ ನೀಡುವ ಅನನ್ಯ ಆಭರಣ ಸಂಗ್ರಹ ಮತ್ತು ಸೇವೆಯನ್ನು ಆನಂದಿಸಬೇಕು” ಎಂದು ವಿನಂತಿಸಿದ್ದಾರೆ. ಅಲ್ಲದೆ ಪುತ್ತೂರಿನ ಈ ಮಳಿಗೆ ನೂರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ನಿರ್ದೇಶಕರಾದ ಡಾ.ಅಬ್ದುಲ್ ರಹೂಫ್ ಮತ್ತು ಅಬ್ದುಲ್ ರಹೀಮ್ ಹೇಳಿದ್ದಾರೆ.

“ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಕರ್ನಾಟಕ ಮತ್ತು ಕೇರಳದಲ್ಲಿ ಒಟ್ಟು 10 ಶೋ ರೂಮ್ಗಳನ್ನು ಹೊಂದಿದೆ. ಹಾಗೆಯೇ ಶೀಘ್ರದಲ್ಲಿ ಮೈಸೂರು ಮತ್ತು ಬೆಂಗಳೂರುನಲ್ಲಿ ಮತ್ತೆರಡು ಮಳಿಗೆಗಳನ್ನು ತೆರೆಯಲಿದೆ. ಸುಲ್ತಾನ್ ಚಿನ್ನ ಆಮದು ಮಾಡುವ ಲೈಸೆನ್ಸ್ ಹೊಂದಿದ್ದು, ಆಮದಿತ ಶುದ್ಧ ಚಿನ್ನದ ಬಾರ್ ಗಳನ್ನು ತಯಾರಿಸುತ್ತದೆ. ಹಾಗೆಯೇ ತನ್ನದೇ ತಯಾರಿಕಾ ಘಟಕವನ್ನು ಹೊಂದಿದೆ. ಹೀಗಾಗಿ ಶುದ್ಧ ಚಿನ್ನದ ಅತ್ಯಂತ ಉತ್ಕೃಷ್ಟವಾಗಿ ತಯಾರಿಸಲಾದ  ಆಭರಣಗಳನ್ನು ಕಡಿಮೆ ಬೆಲೆಯಲ್ಲಿ ನೀಡಲು ನಮಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಸುಲ್ತಾನ್ ನಲ್ಲಿ ಕನಿಷ್ಠ ತಯಾರಿಕಾ ವೆಚ್ಚ ಇದೆ ಮತ್ತು ವೇಸ್ಟೇಜ್ ವೆಚ್ಚ ಇರುವುದಿಲ್ಲ, ಹಾಗೆಯೇ 11 ತಿಂಗಳ ಮಾಸಿಕ ಕಂತುಗಳ ಯೋಜನೆ ಇದೆ. ಪಾವತಿಗಾಗಿ ಮೊಬೈಲ್ ಆಪ್ ಕೂಡ ಇರುತ್ತದೆ. ಮದುವೆ ಮತ್ತು ಇನ್ನಿತರ ಸಮಾರಂಭಗಳಿಗಾಗಿ ಮುಂಗಡ ಪಾವತಿ ಮಾಡಿ. ಚಿನ್ನದ ಬೆಲೆ ಏರಿಕೆಯಿಂದ ರಕ್ಷಣೆ ಪಡೆಯಬಹುದು. ಮದುವೆ ಖರೀದಿಗೆ ವಿಶೇಷ ರಿಯಾಯಿತಿ ಇರುತ್ತದೆ. ಸುಲ್ತಾನ್ ಹಬ್ಬ ಹರಿದಿನಗಳಲ್ಲಿ, ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ವಧು-ವರರಿಗೆ ಹೀಗೆ ಎಲ್ಲಾ ವರ್ಗದ ಜನರಿಗೆ ಜನಪ್ರಿಯ ಆಕರ್ಷಕ ಆಭರಣಗಳ ಮಳಿಗೆಯಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:  08246816916

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top