ಪುತ್ತೂರು: ಸಂಪ್ಯ ಅಕ್ಷಯ ಕಾಲೇಜು ವತಿಯಿಂದ ಸಂವಿಧಾನ ಜಾಗೃತಿ ಜಾಥಾ -2024 ಆರ್ಯಾಪು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಅಕ್ಷಯ ಕಾಲೇಜಿನ ಸುಮಾರು 50ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದು, ಜಾಥಾವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಿ ಸಂವಿಧಾನದ ಕುರಿತು ಮಾಹಿತಿ ನೀಡಲಾಯಿತು.ಬಳಿಕ ಸಂವಿಧಾನ ಮಾಹಿತಿ ಜಾಥಾ ಗ್ರಾಮ ಪಂಚಾಯಿತಿಯಿಂದ ಹೊರಟು ಗ್ರಾಮಾಂತರ ಆರಕ್ಷಕ ಠಾಣೆವರೆಗೆ ನಡೆಸಲಾಯಿತು.

ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ್ಯಕ್ರಮಾಧಿಕಾರಿ ಮೇಘಶ್ರೀ ಹಾಗೂ ಕಾಲೇಜಿನ ಶಿಕ್ಷಕ ವೃಂದ ಉಪಸ್ಥಿತರಿದ್ದರು.