ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರು ಸಂಸ್ಥೆಯ ಮೂಲಕ ಟ್ರಸ್ಟ್ ಅಧ್ಯಕ್ಷರು ಹಾಗೂ ನಿರ್ದೇಶಕರಿಂದ ಕೊಳ್ತಿಗೆ ಗ್ರಾಮದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಸೇವಾ ಕಾರ್ಯ ನಡೆಯಿತು.

ಭಾನುವಾರ ಸಂಜೆ ಬ್ರಹ್ಮಕಲಶೋತ್ಸವದ ಅನ್ನಸಂತರ್ಪಣೆಗಾಗಿ ತರಕಾರಿ ಹಚ್ಚುವ ಕೆಲಸದೊಂದಿಗೆ ಸೇವಾ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ ಹಾಗೂ ಎಲ್ಲಾ ನಿರ್ದೇಶಕರು ಮತ್ತು ನ್ಯೂಸ್ ಪುತ್ತೂರಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೇವಾ ಕಾರ್ಯಕ್ಕೆ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು