ಪುತ್ತೂರು: ಬನ್ನೂರು ಗ್ರಾಮದ ಕುಂಟ್ಯಾನ ಕುಟುಂಬದ ದುಗಲಾಯ, ಧರ್ಮದೈವ ರುದ್ರಾಂಡಿ ಮತ್ತು ಪರಿವಾರ ದೈವಗಳ ನಡಾವಳಿ ಫೆ.21 ಹಾಗೂ 22 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ
ಧರ್ಮ ನಡಾವಳಿ ಅಂಗವಾಗಿ ಫೆ.21 ರಂದು ಬೆಳಿಗ್ಗೆ 8 ಕ್ಕೆ ಗಣಹೋಮ, ಸಂಜೆ 4 ಕ್ಕೆ ದುಗಲಾಯ, ಧರ್ಮದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವುದು. ಸಂಜೆ 6 ಕ್ಕೆ ದುಗಲಾಯ ದೈವದ ನೇಮ, ರಾತ್ರಿ 9 ಕ್ಕೆ ಅನ್ನಸಂತರ್ಪಣೆ, ವರ್ಣಾರ ಪಂಜುರ್ಲಿ, ಜಾವತೆ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಕಲ್ಕುಡ ದೈವಗಳ ನೇಮ ನಡೆಯಲಿದೆ.
ಫೆ. 22 ಗುರುವಾರ ಬೆಳಿಗ್ಗೆ 6 ಕ್ಕೆ ಧರ್ಮದೈವ ರುದ್ರಾಂಡಿ ದೈವದ ನೇಮೋತ್ಸವ, ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ಬಳಿಕ ಗುಳಿಗ ದೈವದ ನೇಮ ನಡೆಯಲಿದೆ ಎಂದು ತರವಾಡು ಮನೆಯ ಪ್ರವೀಣ್ ಕುಂಟ್ಯಾನ ಹಾಗೂ ರಾಜೀವ ಗೌಡ ಕುಂಟ್ಯಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.