ಪುತ್ತೂರು: ಪುರುಷರಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಉಚಿತ ಗುದಾಗತ ರೋಗಗಳ ತಪಾಸಣಾ ಶಿಬಿರ (ಪೈಲ್ಸ್, ಫಿಷರ್, ಫಿಸ್ತುಲ) ಫೆ.18 ಭಾನುವಾರ ನಡೆಯಲಿದೆ.
ಮಧ್ಯಾಹ್ನ 2 ರಿಂದ ಸಂಜೆ 5 ರ ತನಕ ನಡೆಯುವ ಶಿಬಿರದಲ್ಲಿ ಪೈಲ್ಸ್, ಫಿಷರ್, ಫಿಸ್ತುಲ ಮುಂತಾದ ಗುದ ಸಂಬಂಧಿ ರೋಗಗಳು, ಮಲಬದ್ಧತೆ, ಗುದದ್ವಾರದಲ್ಲಿ ಊತ, ನೋವು, ಕೀವು, ತುರಿಕೆ, ರಕ್ತಸ್ರಾವ ಮುಂತಾದ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷಿಸದೇ ಕೂಡಲೇ ತಪಾಸಣೆ ಮಾಡಿಕೊಂಡು ಮುಂದೆ ಆಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಹಾಗಾಗಿ ನಮ್ಮ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಉಚಿತವಾಗಿ ಶಲ್ಯ ತಂತ್ರ ವಿಭಾಗದ ತಜ್ಞ ವೈದ್ಯರ ತಪಾಸಣೆ, ಸಲಹೆ ಮತ್ತು ಸಂದರ್ಶನವನ್ನು ಆಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಶಸ್ತ್ರಕ್ರಿಯೆಗೆ ಒಳಪಡದೆ ಆಯುರ್ವೇದೀಯ ಕ್ಷಾರ ಕರ್ಮವನ್ನು ಅತ್ಯಂತ ರಿಯಾಯಿತಿ ದರದಲ್ಲಿ ಮಾಡಲಾಗುವುದು. ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆದುಕೊಳ್ಳಲು ಫೆ.17ನೇ ಶನಿವಾರದ ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞರು ಡಾ ಸುಜಯ್ ತಂತ್ರಿ, ಕೆಮ್ಮಿಂಜೆ ತಿಳಿಸಿದ್ದಾರೆ.
ವಿಶೇಷವಾಗಿ ಶಲ್ಯ ತಂತ್ರ ವಿಭಾಗದ ತಜ್ಞ ವೈದ್ಯರು ಪ್ರತೀ ಆದಿತ್ಯವಾರ ಸಂಜೆ 3.30ರಿಂದ 5.30ರ ವರೆಗೆ ಲಭ್ಯರಿರುತ್ತಾರೆ. ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ನೋಂದಾವಣೆಗಾಗಿ ಡಾ ಸುಜಯ್ ತಂತ್ರಿ, ಕೆಮ್ಮಿಂಜೆ B.A.M.S., M.D., FCCAP, ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞರು, ಮೊ: 9036156242/9844638242 ಸಂಪರ್ಕಿಸಬಹುದು.